Advertisement

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

10:37 PM Apr 30, 2024 | Team Udayavani |

ನವದೆಹಲಿ: ಪತಂಜಲಿಯ ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಭಾರತೀಯ ವೈದ್ಯಕೀಯ ಸಂಘ(ಐಎಂಎ)ಕ್ಕೇ ಈಗ ಸಂಕಟ ಎದುರಾಗಿದೆ. ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಟೀಕೆ ವ್ಯಕ್ತಪಡಿಸಿದೆ ಎಂಬ ಐಎಂಎ ಅಧ್ಯಕ್ಷರ ಹೇಳಿಕೆಗೆ ಗರಂ ಆಗಿರುವ ನ್ಯಾಯಪೀಠ ಈ ಬಗ್ಗೆ ಅರ್ಜಿ ದಾಖಲಿಸುವಂತೆ ಪತಂಜಲಿಯ ಪರ ವಕೀಲರಿಗೆ ಮಂಗಳವಾರ ಸೂಚಿಸಿದೆ.

Advertisement

ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ಪತಂಜಲಿಯ ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ಆಚಾರ್ಯ ಕೋರಿದ್ದ ಸಾರ್ವಜನಿಕ ಕ್ಷಮಾಪಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಈ ವೇಳೆ, ಐಎಂಎ ಅಧ್ಯಕ್ಷರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೋರ್ಟ್‌ ನಡೆಯ ಬಗ್ಗೆ ಪ್ರಶ್ನಿಸಿದ್ದಾರೆ. ಇದು ಕೋರ್ಟ್‌ ಪ್ರಕ್ರಿಯೆಲ್ಲಿ ನೇರ ಹಸ್ತಕ್ಷೇಪ ಎಂದು ಪತಂಜಲಿ ಪರ ವಕೀಲ ಮುಕುಲ್‌ ರೋಹrಗಿ ಹೇಳಿದರು.

ಆಗ ಪ್ರತಿಕ್ರಿಯಿಸಿದ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ ಅವರಿದ್ದ ಪೀಠವು, ಈ ಬಗ್ಗೆ ಅರ್ಜಿ ಸಲ್ಲಿಸಿ. ಇದು(ಐಎಂಎ ಹೇಳಿಕೆ) ಇನ್ನೂ ಗಂಭೀರವಾದ ವಿಷಯವಾಗಿದೆ. ಅವರು(ಎಂಎಎ) ಗಂಭೀರ ಪರಿಣಾಮವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಹೇಳಿತು.

ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದ ಐಎಂಎ ಅಧ್ಯಕ್ಷ ವಿ.ಅಶೋಕನ್‌ ಅವರು, ಖಾಸಗಿ ವೈದ್ಯರು ಮತ್ತು ಐಎಂಎ ಅನ್ನು ಸುಪ್ರೀಂ ಕೋರ್ಟ್‌ ಟೀಕಿಸಿರುವ ದುರದೃಷ್ಟಕರ ಎಂದು ಹೇಳಿದ್ದರು.

ನಿಷ್ಕ್ರೀಯತೆ  ಹೇಗೆ ಸಮರ್ಥಿಸುತ್ತೀರಿ?

Advertisement

ಇದಕ್ಕೂ ಮೊದಲು ಪೀಠವು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರ(ಎಸ್‌ಎಲ್‌ಎ) ವಿರುದ್ಧ ಹರಿ ಹಾಯಿತು. ಪತಂಜಲಿಯ 14 ಉತ್ಪನ್ನಗಳ ಮೇಲಿನ ನಿಷೇಧ ಮತ್ತು ಬಾಬಾ ರಾಮದೇವ್‌, ಆಚಾರ್ಯ ಬಾಲಕೃಷ್ಣ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿರುವ ಬಗ್ಗೆ ಎಸ್‌ಎಲ್‌ಎ ಅಫಿಡವಿಟ್‌ ಸಲ್ಲಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಪೀಠವು, ಈ ಕೆಲಸವನ್ನು ಇಷ್ಟು ದಿನ ಯಾಕೆ ಮಾಡಲಿಲ್ಲ. ನಿಮ್ಮ ನಿಷ್ಕ್ರೀಯತೆಯನ್ನು ಹೇಗೆ ಸಮರ್ಥಿಸುತ್ತೀರಿ ಎಂದು ಪ್ರಶ್ನಿಸಿತು.

ಈಗ ಕ್ಷಮಾಪಣೆ ಸುಧಾರಿಸಿದೆ: ಪತಂಜಲಿ ಆಯುರ್ವೇದವು ತನ್ನ ಕ್ಷಮಾಪಣೆಯಲ್ಲಿ ಸಹ ಸಂಸ್ಥಾಪಕ ಬಾಬಾ ರಾಮದೇವ್‌ ಅವರ ಹೆಸರನ್ನು ನಮೂದಿಸುವ ಮೂಲಕ ಸುಧಾರಣೆಯನ್ನು ತೋರಿಸಿದೆ ಎಂದು ಪೀಠವು ಮೆಚ್ಚುಗೆ ವ್ಯಕ್ತಪಡಿಸಿತು. ಜತೆಗೆ ಮುಂದಿನ ವಿಚಾರಣೆಯಿಂದ ರಾಮ್‌ದೇವ್‌, ಬಾಲಕೃಷ್ಣರನ್ನು ಖುದ್ದು ಹಾಜರಾತಿ ಬೇಡ ಎಂದು ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next