Advertisement

ಕಂಚ ಐಲಯ್ಯ ಪುಸ್ತಕ ನಿಷೇಧಕ್ಕೆ ಸುಪ್ರೀಂ ನಕಾರ

06:30 AM Oct 16, 2017 | Team Udayavani |

ನವದೆಹಲಿ: ಪ್ರತಿಯೊಬ್ಬ ಲೇಖಕನಿಗೂ ತನ್ನ ಅಭಿಪ್ರಾಯ, ಆಲೋಚನೆಯನ್ನು ಅಭಿವ್ಯಕ್ತಿಸುವ ಮೂಲಭೂತ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿದ್ದು, ತಮಿಳುನಾಡಿನ ಖ್ಯಾತ ದಲಿತ ಲೇಖಕ ಕಂಚ ಐಲಯ್ಯ ಅವರ ವಿವಾದಿತ ಪುಸ್ತಕಕ್ಕೆ ನಿಷೇಧ ಹೇರಲು ನಿರಾಕರಿಸಿದೆ. 

Advertisement

“ವ್ಯಾಸರು ಸಾಮಾಜಿಕ ಕಳ್ಳಸಾಗಣೆದಾರರು’ ಎಂದು ಹೇಳುವ ಕೃತಿಯನ್ನು ನಿಷೇಧಿಸುವಂತೆ ಕೋರಿ ಆರ್ಯ ವೈಶ್ಯ ಸಂಘದ ಸದಸ್ಯರಾದ ವಕೀಲರೊಬ್ಬರು ಪಿಐಎಲ್‌ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ, “ಒಬ್ಬ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಯತ್ನವನ್ನು ಹಗುರವಾಗಿ ಪರಿಗಣಿಸಲೇಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪಾವಿತ್ರ್ಯತೆಯನ್ನು ಪರಿಗಣಿಸಿ, ಅರ್ಜಿದಾರನ ಕೋರಿಕೆಯನ್ನು ತಿರಸ್ಕರಿಸುತ್ತಿದ್ದೇವೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next