Advertisement

ಜಾನ್ಸನ್ ಬೇಬಿ ಪೌಡರ್ ವಿವಾದ : 2.1 ಬಿಲಿಯನ್ ಡಾಲರ್ ಪಾವತಿಸಲು ಕೋರ್ಟ್ ಆದೇಶ

02:45 PM Jun 02, 2021 | Team Udayavani |

ವಾಷಿಂಗ್ಟನ್ :  ಜಾನ್ಸನ್  ಬೇಬಿ ಪೌಡರ್  ಹಾಗೂ ಟಾಲ್ಕ್ ಪೌಡರ್ ಉತ್ಪನ್ನಗಳಲ್ಲಿ ಮಹಿಳೆಯರ ಅಂಡಾಶಯಕ್ಕೆ ಸಂಬಂಧಿಸಿದ ಕ್ಯಾನ್ಸರ್ ಕಾರಕ ಅಂಶಗಳು ಇವೆ ಎಂಬ ಆರೋಪದ ಮೇಲೆ ಜಾನ್ಸನ್ ಆ್ಯಂಡ್ ಜಾನ್ಸನ್ ಗೆ ಹೊರಡಿಸಿದ್ದ  2.1 ಬಿಲಿಯನ್ ಡಾಲರ್ ಹಣವನ್ನು ಪಾವತಿಯ ಆದೇಶವನ್ನು ಹಿಂದೆ ತೆಗೆದುಕೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಮಿಸ್ಸೌರಿ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Advertisement

ಕಳೆದ ವರ್ಷ ಮಿಸ್ಸೌರಿ ಸುಪ್ರೀಂ ಕೋರ್ಟ್ ಜಾನ್ಸನ್ ಪೌಡರ್ ಗಳಲ್ಲಿ ಕಾನ್ಸರ್ ಕಾರಕ ಅಂಶಗಳಿವೆ, ಪರಿಹಾರ ಮೊತ್ತವಾಗಿ 2.1 ಬಿಲಿಯನ್ ಡಾಲರ್ ಹಣವನ್ನು ಪಾವತಿ ಮಾಡಬೇಕೆಂದು ಆದೇಶ ನೀಡಿತ್ತು. ಈ ವಿಚಾರವಾಗಿ ಜಾನ್ಸನ್ ಸಂಸ್ಥೆ ದಂಡವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ : ಮಗನ ಸಿನಿಮಾಕ್ಕೆ ಅಪ್ಪನ ಕಥೆ : ಹಾಲಿವುಡ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಾರಂತೆ ರಾಜಮೌಳಿ

ಈ ವಿವಾದವು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಮಾಜಿ ಆಕ್ಟಿಂಗ್ ಸಾಲಿಸಿಟರ್ ಜನರಲ್ ನೀಲ್ ಕಟ್ಯಾಲ್ ನ್ಯೂ ಬ್ರನ್ಸ್ವಿಕ್, ನ್ಯೂಜೆರ್ಸಿ ಮೂಲದ ಔಷಧ ತಯಾರಕ ಮತ್ತು ಮಾಜಿ ವೈಟ್‌ ವಾಟರ್ ಪ್ರಾಸಿಕ್ಯೂಟರ್ ಪರವಾಗಿ ವಾದಿಸಿದ್ದರು, ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ ಅಂಡಾಶಯದ ಕ್ಯಾನ್ಸರ್ ಹೊಂದಿರುವ ಮಹಿಳೆಯರನ್ನು ಪರವಾಗಿ ವಾದ ಮಂಡಿಸಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ, ಮೇ 2020 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ತನ್ನ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿದೆ ಎಂದು ತಿಳಿಸಿದೆ. ಮಾತ್ರವಲ್ಲದೇ, ಉತ್ಪನ್ನದ ಬೇಡಿಕೆಗೆ ಹೊಡೆತ ನೀಡುವ ಉದ್ದೇಶದಿಂದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕೂಡ ಹೇಳಿದೆ.

Advertisement

ಕಂಪನಿಯು ತನ್ನ ಟಾಲ್ಕ್ ಉತ್ಪನ್ನಗಳ ಮೇಲೆ 21,800 ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಎದುರಿಸುತ್ತಿದೆ ಎಂದು ಹೇಳಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ “ತಮ್ಮ ಟಾಲ್ಕ್ ಪೌಡರ್ ಗಳಲ್ಲಿ  ಕ್ಯಾನ್ಸರ್ ಕಾರಕ ಅಂಶ ಆ್ಯಸ್ಬೆಸ್ಟಾಸ್( asbestos) ಎಂದು ದಶಕಗಳ ಹಿಂದೆ ತಿಳಿದಿತ್ತು, ಇದು ಸುರಕ್ಷಿತ ಮಾನ್ಯತೆ ಮಟ್ಟವನ್ನು ಹೊಂದಿರದ ಕ್ಯಾನ್ಸರ್ ಕಾರಕ ಅಂಶವಾಗಿದೆ” ಎಂದು ನ್ಯಾಯಾಧೀಶರ ಸ್ಟಾರ್ ತಮ್ಮ ಸಂಕ್ಷಿಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು, ಟಾಲ್ಕ್‌ ಬದಲಾಗಿ ಕಾರ್ನ್‌ ಸ್ಟಾರ್ಚ್‌ಗೆ ಬಳಸಬಹುದು ಎಂದು 1973 ರ ಹಿಂದೆಯೇ ತಮ್ಮದೇ ವಿಜ್ಞಾನಿಗಳು ಪ್ರಸ್ತಾಪಿಸಿದ್ದರು. ಆದರೆ ಟಾಲ್ಕ್ ಅಗ್ಗವಾಗಿತ್ತು ಮತ್ತು ಅರ್ಜಿದಾರರು ಸುರಕ್ಷಿತ ಉತ್ಪನ್ನವನ್ನು ನೀಡುವುದರಿಂದ ಲಾಭಕ್ಕೆ ಕುತ್ತಾಗುತ್ತದೆ ಎಂಬ ಕಾರಣದಿಂದ ಅದನ್ನು ಉತ್ಪನ್ನದಲ್ಲಿ ಬಳಸಲು ಮುಂದಾಗಿಲ್ಲ ಎಂದು ಅವರು ಬರೆದಿದ್ದಾರೆ.

ಸಂಸ್ಥೆಯ ಪರವಾಗಿ ವಾದಿಸಿದ ನ್ಯಾಯಾಧೀಶ ಕಟ್ಯಾಲ್, “ಫೆಡರಲ್ ರೆಗ್ಯುಲೇಟರ್ಸ್ ಮತ್ತು  ಆರೋಗ್ಯ ಸಂಸ್ಥೆಗಳು ಟಾಲ್ಕ್ ಬಗ್ಗೆ ಇದುವರೆಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ.  ಮತ್ತು ಹತ್ತಾರು ಟಾಲ್ಕ್ ಬಳಕೆದಾರರನ್ನು ಪತ್ತೆಹಚ್ಚುವ ಸಮಗ್ರ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು ಕಾಸ್ಮೆಟಿಕ್ ಟಾಲ್ಕ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿವೆ ಎಂದು ಹೇಳಿದರು.

ಇದನ್ನೂ ಓದಿ : ಮಂಗಳೂರು : ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ನಾಲ್ವರು ಆರೋಪಿಗಳ ಬಂಧನ

ಇನ್ನು, ನ್ಯಾಯಾಲಯದ ಮುಂದೆ ಇರುವ ಈ ವಿವಾದ ವಿಷಯಗಳು ಕಾನೂನು ಕಾರ್ಯವಿಧಾನಕ್ಕೆ ಸಂಬಂಧಿಸಿವೆ, ಮತ್ತು ಸುರಕ್ಷತೆಗೆ ಅಲ್ಲ, ”ಎಂದು ಹೇಳಿರುವ ಕಂಪೆನಿ, “ದಶಕಗಳಿಂದ  ವೈಜ್ಞಾನಿಕ ಮೌಲ್ಯಮಾಪನಗಳು ಹೇಳುವ ಪ್ರಕಾರ ಜಾನ್ಸನ್‌ ಬೇಬಿ ಪೌಡರ್ ಸುರಕ್ಷಿತವಾಗಿದೆ, ಕ್ಯಾನ್ಸರ್ ಕಾರಕ ಯಾವುದೇ ಅಂಶವನ್ನು ಹೊಂದಿರುವುದಿಲ್ಲ ಎಂದು ಕಂಪೆನಿ ತನ್ನನ್ನು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ : ಭಾರತದಲ್ಲಿ ಕೋವಿಡ್ 2ನೇ ಅಲೆಯಲ್ಲಿ 594 ವೈದ್ಯರು ಸಾವು

Advertisement

Udayavani is now on Telegram. Click here to join our channel and stay updated with the latest news.

Next