Advertisement

Supreme Court ಋತುಸ್ರಾವದಲ್ಲಿ ಮಹಿಳೆಯರಿಗೆ ವರ್ಕ್‌ಫ್ರಂ ಹೋಂ

09:57 PM Aug 26, 2023 | Team Udayavani |

ನವದೆಹಲಿ: ಋತುಸ್ರಾವದ ಸಂದರ್ಭಗಳಲ್ಲಿ ನ್ಯಾಯಾಲಯದ ಮಹಿಳಾ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವುದಕ್ಕೆ ನಾನು ಅನುಮತಿಸುತ್ತಿದ್ದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರು ತಿಳಿಸಿದ್ದಾರೆ.

Advertisement

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯುನಿವರ್ಟಿಟಿ (ಎನ್‌ಎಲ್‌ಎಸ್‌ಯು)ಯ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಕಾನೂನು ವೃತ್ತಿಯನ್ನು ಆಯ್ಕೆ ಮಾಡುವ ಮಹಿಳೆಯರನ್ನು ಪ್ರಶಂಸಿಸುವುದರ ಜತೆಗೆ ಪ್ರೋತ್ಸಾಹಿಸುವ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಈ ಹಿಂದಿದ್ದ ಪರಿಸ್ಥಿತಿಗಳು ಮತ್ತು ಈಗಿನ ಸುಧಾರಣೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ.

ನಿಧನರಾಗಿರುವ ತಮ್ಮ ಪತ್ನಿಯ ಉದಾಹರಣೆಯನ್ನೇ ನೀಡಿರುವ ಅವರು, ನನ್ನ ಪತ್ನಿ ವಕೀಲೆಯಾಗಿದ್ದರು. ಆಕೆ ಮೊದಲು ಕಾನೂನು ಸಂಸ್ಥೆಯೊಂದಕ್ಕೆ ಕೆಲಸಕ್ಕೆ ತೆರಳಿ, ನನ್ನ ಕೆಲಸದ ಅವಧಿ ಏನೆಂದು ಕೇಳಿದಾಗ ಆಕೆಗೆ ದಿನದ 24 ಗಂಟೆಗಳು ಹಾಗೂ 365 ದಿನಗಳು ಎಂದು ಹೇಳಲಾಗಿತ್ತು. ಕುಟುಂಬಕ್ಕೆಂದು ಸಮಯ ನೀಡುವುದಕ್ಕೆಲ್ಲ ಸಾಧ್ಯವಿಲ್ಲ, ಮನೆ ಕೆಲಸಗಳನ್ನು ಮಾಡಬಲ್ಲ ಗಂಡನನ್ನು ಹುಡುಕಿಕೊಳ್ಳಿ ಎಂದೂ ಹೇಳಲಾಗಿತ್ತು ಆದರೀಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ.

ಅಂಥ ಬದಲಾವಣೆಗೆ ತಮ್ಮ ಕೊಡುಗೆಯನ್ನೇ ಉದಾಹರಣೆ ನೀಡಿರುವ ಸಿಜೆಐ” ಕಳೆದ ವರ್ಷ ಸುಪ್ರೀಂಕೋರ್ಟ್‌ ನಲ್ಲಿದ್ದ 5 ಕ್ಲರ್ಕ್‌ಗಳ ಪೈಕಿ ನಾಲ್ವರು ಮಹಿಳೆಯರು. ಪ್ರತಿ ತಿಂಗಳು ಅವರು ಸರ್‌, ನಮಗೆ ಋತುಸ್ರಾವ ಸಂಬಂಧಿಸಿದ ಸಮಸ್ಯೆ ಎಂದು ಹೇಳುತ್ತಿದ್ದರು. ನಾನು ಕೂಡಲೇ ಸರಿ, ನೀವು ಮನೆಯಿಂದ ಕೆಲಸ ಮಾಡಿ, ನಿಮ್ಮ ಆರೋಗ್ಯ ನೋಡಿಕೊಳ್ಳಿ ಎನ್ನುತ್ತಿದ್ದೆ.ಅಷ್ಟು ಮುಕ್ತ ವಾತಾವರಣ ಅವರಿಗಿತ್ತು ನಾವು ಸುಪ್ರೀಂಕೋರ್ಟ್‌ನ ಶೌಚಾಲಯಗಳಲ್ಲಿ ಮಹಿಳೆಯರಿಗಾಗಿ ನ್ಯಾಪ್ಕಿನ್‌ಗಳನ್ನೂ ಇರಿಸಿದ್ದೇವೆ’ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next