Advertisement

ಕ್ಷಮೆಯಾಚಿಸಿ ನ್ಯಾಯಾಂಗ ನಿಂದನೆ ಕೈಬಿಡುತ್ತೇವೆ: ಅನುರಾಗ್‌ಗೆ ಸುಪ್ರೀಂ

03:45 AM Jul 08, 2017 | Team Udayavani |

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್‌ ಠಾಕೂರ್‌ಗೆ ಬೇಷರತ್‌ ಕ್ಷಮೆಯಾಚಿಸುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. 

Advertisement

ಯಾವುದೇ ಗೊಂದಲವಿಲ್ಲದ, ಸ್ಪಷ್ಟವಾದ ಕ್ಷಮೆಯಾಚನೆಯನ್ನು ಒಂದು ಪುಟದ ಪ್ರಮಾಣಪತ್ರದಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಇದಕ್ಕೂ ಮೊದಲು ಅನುರಾಗ್‌ ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ತಿರಸ್ಕರಿಸಿರುವ ನ್ಯಾಯಪೀಠ ಮತ್ತೂಂದು ಅವಕಾಶ ನೀಡಿದೆ. ಒಂದು ವೇಳೆ ನ್ಯಾಯಪೀಠದ ನಿರ್ದೇಶನದಂತೆ ನಡೆದುಕೊಂಡರೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡುವುದಾಗಿ ತಿಳಿಸಿದೆ. ಅಲ್ಲದೇ ಜು.14ರಂದು ಬಿಸಿಸಿಐ ಆಡಳಿತಾತ್ಮಕ ಸುಧಾರಣೆಗಳ ಕುರಿತು ನಡೆಯುವ ವಿಚಾರಣೆ ವೇಳೆ ಸ್ವತಃ ಹಾಜರಿರುವಂತೆ ಅನುರಾಗ್‌ಗೆ ಆದೇಶಿಸಿದೆ. 2016 ಆಗಸ್ಟ್‌ನಲ್ಲಿ ಬಿಸಿಸಿಐ ಸುಧಾರಣೆಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಅದಾದ ನಂತರ ಐಸಿಸಿಗೆ ಮನವಿ ಮಾಡಿದ್ದ ಅನುರಾಗ್‌, ಆಡಳಿತಾತ್ಮಕ ಸುಧಾರಣೆಗಳಿಂದ ಸರ್ಕಾರದ ಮಧ್ಯಪ್ರವೇಶವಾದಂತಾಗುತ್ತದೆ. ಆದ್ದರಿಂದ ಬಿಸಿಸಿಐಯನ್ನು ಅಮಾನ್ಯಗೊಳಿಸಬೇಕಾಗುತ್ತದೆ ಎಂಬ ಪತ್ರವನ್ನು ನೀಡಿ ಎಂದು ಹೇಳಿದ್ದರು. ಇದು ನ್ಯಾಯಾಂಗ ನಿಂದನೆ ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next