Advertisement
ಭ್ರೂಣ ಆರೋಗ್ಯವಾಗಿದೆ ಎಂಬ ಏಮ್ಸ್ ವೈದ್ಯ ಕೀಯ ಮಂಡಳಿಯ ವರದಿಯ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಈ ತೀರ್ಪು ಹೊರಬಿದ್ದಿದೆ. ಅರ್ಜಿಯ ವಿಚಾರಣೆ ನಡೆಸಿದೆ ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿ ವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯ ಪೀಠ, “ಗರ್ಭ ಧರಿಸಿ 26 ವಾರಗಳು ಹಾಗೂ 5 ದಿನ ಗಳು ಕಳೆದಿವೆ. ತಾಯಿಗೆ ಯಾವುದೇ ಅಪಾಯವಿಲ್ಲ ಹಾಗೂ ಭ್ರೂಣ ಕೂಡ ಆರೋಗ್ಯವಾಗಿದೆ. ಈ ಸಂದರ್ಭದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿದರೆ ವೈದ್ಯಕೀಯ ಗರ್ಭಪಾತದ ಗರ್ಭಾವಸ್ಥೆ ಕಾಯ್ದೆಯ ಸೆಕ್ಷನ್ 3 ಮತ್ತು 5ರ ಉಲ್ಲಂಘನೆಯಾಗಲಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶವಿಲ್ಲ’ ಎಂದು ತೀರ್ಪು ನೀಡಿದೆ. ಅಲ್ಲದೇ, “ಭ್ರೂಣದ ಹೃದಯಬಡಿತವನ್ನು ನಿಲ್ಲಿಸುವ ಅಧಿಕಾರ ನಮಗಿಲ್ಲ’ ಎಂದೂ ನ್ಯಾಯಪೀಠ ಹೇಳಿದೆ.
ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾ ಹಿಮಾ ಕೊಹ್ಲಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು, ಭಿನ್ನ ತೀರ್ಪು ನೀಡಿತ್ತು. ನಂತರ ಇದನ್ನು ಸಿಜೆಐ ನೇತೃತ್ವದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು.