Advertisement
ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಸೂರ್ಯಕಾಂತ್ ಮತ್ತು ನಾ. ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಭವಾನಿ ರೇವಣ್ಣ 55 ವರ್ಷದ ಮಹಿಳೆಯಾಗಿದ್ದು, ಮಗ ಮಾಡಿದ ತಪ್ಪಿಗೆ ತಾಯಿಯನ್ನು ದೂಷಿಸುವುದು ಸರಿಯಲ್ಲ ಎಂಬ ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ ಎಂದು ಹೇಳಿತು.
ಅಂತಿಮವಾಗಿ ಕರ್ನಾಟಕ ಸರ್ಕಾರದ ಮನವಿಯಂತೆ ಭವಾನಿ ಅವರಿಗೆ ನೋಟಿಸ್ ನೀಡಲು ಪೀಠವು ಒಪ್ಪಿಕೊಂಡಿತು.
**
ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರುವುದು ಅತ್ಯಂತ $ದುರದೃಷ್ಟಕರ. ಸಂತ್ರಸ್ತೆಯ ಅಪಹರಣದಲ್ಲಿ ಭವಾನಿ ಸಕ್ರಿಯರಾಗಿದ್ದಾರೆ ಮತ್ತು ಇದೆಲ್ಲವೂ ಅವರಿಗೆ ಗೊತ್ತಿತ್ತು. ರೇವಣ್ಣ ಕುಟುಂಬದ ನಿರ್ದೇಶನದ ಮೇರೆಗೆ ಸಂತ್ರಸ್ತೆಯನ್ನು ಬಂಧನದಲ್ಲಿಡಲಾಗಿತ್ತು ಎಂದು ಕರ್ನಾಟಕ ಸರ್ಕಾರ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು. ಆಗ ಪ್ರತಿಕ್ರಿಯಿಸಿದ ಪೀಠವು, ನಾವು ಮಹಿಳೆಯ ಸ್ವಾತಂತ್ರ್ಯವನ್ನು ಮಾತ್ರವೇ ಪರಿಗಣಿಸುತ್ತಿದ್ದೇವೆ ಎಂದು ಹೇಳಿತು. ಇದಕ್ಕೆ ಉತ್ತರಿಸಿದ ಸಿಬಲ್, ಸಾಮಾನ್ಯವಾಗಿ ಮಕ್ಕಳೇನು ಮಾಡುತ್ತಿದ್ದಾರೆಂಬುದರ ಬಗ್ಗೆ ತಾಯಿಗೆ ಅರಿವು ಇರುತ್ತದೆ ಎಂದು ಹೇಳಿದರು. ಅಂತಿಮವಾಗಿ ಕರ್ನಾಟಕ ಸರ್ಕಾರದ ಮನವಿಯಂತೆ ಭವಾನಿ ಅವರಿಗೆ ನೋಟಿಸ್ ನೀಡಲು ಪೀಠವು ಒಪ್ಪಿಕೊಂಡಿತು. ಕಾನೂನು ತನ್ನದೇ ಆದ ಪರಿಣಾಮಗಳನ್ನು ಹೊಂದಿರುತ್ತದೆ ಎಂಬುದನ್ನು ಮರೆಯಬಾರದು. ಈ ಪ್ರಕರಣಧಲ್ಲಿ ಭವಾನಿ ಅವರು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಆದರೆ, ಭವಾನಿಯನ್ನು ಬಂಧನದಿಂದ ರಕ್ಷಿಸುವಲ್ಲಿ ಹೈಕೋರ್ಟ್ ಸಮರ್ಥನೆಯಾಗಿದೆಯೇ ಎಂದು ನಾವು ನೋಡಬೇಕಾಗಿದೆ. ನಾವು ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಪೀಠವು ಹೇಳಿತು.