ಪಾಟ್ನಾ:ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 3.5 ಲಕ್ಷ ಶಿಕ್ಷಕರ ಕೆಲಸವನ್ನು ಖಾಯಂಗೊಳಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸುವ ಮೂಲಕ ಶಿಕ್ಷಕ ಸಮೂಹಕ್ಕೆ ದೊಡ್ಡ ಹಿನ್ನಡೆ ತಂದಿದೆ.
ಬಿಹಾರದಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕೂಡಾ ಖಾಯಂ ಶಿಕ್ಷಕರಿಗೆ ನೀಡುವಷ್ಟೇ ಸಮಾನವಾದ ಸಂಬಳವನ್ನು ಪಾವತಿಸಬೇಕೆಂದು ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ರಾಜ್ಯದಲ್ಲಿನ ಗುತ್ತಿಗೆ ಆಧಾರದಲ್ಲಿ ಬರೋಬ್ಬರಿ 3.5 ಲಕ್ಷ ಶಿಕ್ಷಕ, ಶಿಕ್ಷಕಿಯರು ಕೆಲಸ ಮಾಡುತ್ತಿದ್ದು, ತಮಗೂ ಖಾಯಂ ಶಿಕ್ಷಕರಿಗೆ ನೀಡುತ್ತಿರುವ ಸಂಬಳ ಹಾಗೂ ಸೌಲಭ್ಯಗಳನ್ನು ನೀಡಬೇಕು. ನಾವು ಕೂಡಾ ಖಾಯಂ ಶಿಕ್ಷಕರಷ್ಟೇ ಕೆಲಸ ಮಾಡುತ್ತಿದ್ದೇವೆ, ವಿದ್ಯಾರ್ಹತೆ ಕೂಡಾ ಸಮಾನಾಂತರವಾಗಿದೆ ಎಂದು ಶಿಕ್ಷಕರು ಆಗ್ರಹಿಸಿದ್ದರು.
ಏತನ್ಮಧ್ಯೆ ಗುತ್ತಿಗೆ ಆಧಾರದ ಶಿಕ್ಷಕರಿಗೂ ಖಾಯಂ ಶಿಕ್ಷಕರಿಗೆ ನೀಡುವ ಸಂಬಳವನ್ನು ನೀಡಬೇಕೆಂಬ ಪಾಟ್ನಾ ಹೈಕೋರ್ಟ್ ಆದೇಶವನ್ನು ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.