Advertisement

Hindenburg Case:ಅದಾನಿಗೆ ಸೆಬಿ ಕ್ಲೀನ್‌ ಚಿಟ್‌ ಎತ್ತಿಹಿಡಿದ ಸುಪ್ರೀಂ, SIT ತನಿಖೆಗೆ ನಕಾರ

01:15 PM Jan 03, 2024 | Team Udayavani |

ನವದೆಹಲಿ: ಅದಾನಿ-ಹಿಂಡನ್‌ ಬರ್ಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ಬುಧವಾರ (ಜನವರಿ 03) ನಿರಾಕರಿಸುವ ಮೂಲಕ ಸೆಬಿ ಕ್ಲೀನ್‌ ಚಿಟ್‌ ಅನ್ನು ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ತನಿಖೆಯನ್ನು ಸೆಬಿಯಿಂದ ಎಸ್‌ ಐಟಿಗೆ ವರ್ಗಾಯಿಸಲು ಯಾವುದೇ ಆಧಾರವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:Belagavi: ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆಗೈದ ಕೀಚಕರು! ತಡವಾಗಿ ಬೆಳಕಿಗೆ ಬಂದ ಘಟನೆ

ಅದಾನಿ ಸಮೂಹ ಸಂಸ್ಥೆಗಳ ಷೇರುದರದಲ್ಲಿ ವಂಚನೆ ನಡೆದಿದೆ ಎಂಬ ಹಿಂಡನ್‌ ಬರ್ಗ್‌ ವರದಿಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಲ್ಪಟ್ಟ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿತ್ತು.

ಅದಾನಿ-ಹಿಂಡನ್‌ ಬರ್ಗ್‌ ಪ್ರಕರಣದ ಕುರಿತು ನಾಲ್ಕು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಸಿಜೆಐ ಡಿ.ವೈ ಚಂದ್ರಚೂಡ್‌, ಜಸ್ಟೀಸ್‌ ಜೆಬಿ ಪಾರ್ಡಿವಾಲಾ ಮತ್ತು ಜಸ್ಟೀಸ್‌ ಮನೋಜ್‌ ಮಿಶ್ರಾ ನೇತೃತ್ವದ ಪೀಠ ಈ ತೀರ್ಪನ್ನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ವಿಶಾಲ್‌ ತಿವಾರಿ, ಎಂ.ಎಲ್.ಶರ್ಮಾ ಮತ್ತು ಕಾಂಗ್ರೆಸ್‌ ಮುಖಂಡ ಜಯ ಠಾಕೂರ್‌ ಮತ್ತು ಅನಾಮಿಕಾ ಜೈಸ್ವಾಲ್‌ ಸಲ್ಲಿಸಿದ್ದ ಪಿಐಎಲ್‌ ನ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಪೀಠ ಕಳೆದ ವರ್ಷ ನವೆಂಬರ್‌ 24ರಂದು ತೀರ್ಪನ್ನು ಕಾಯ್ದಿರಿಸಿತ್ತು.

Advertisement

ಅದಾನಿ ಸಮೂಹ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಹಿಂಡನ್‌ ಬರ್ಗ್‌ ವರದಿ ಬಹಿರಂಗದ ನಂತರ ಅದಾನಿ ಗ್ರೂಪ್‌ ನ ಷೇರುಗಳ ಬೆಲೆ ಭಾರೀ ಕುಸಿತ ಕಂಡಿರುವುದಾಗಿ ಪಿಐಎಲ್‌ ನಲ್ಲಿ ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next