ನವದೆಹಲಿ: ವಕ್ಫ್ ಕಾಯಿದೆ ಹಿಂದೂಗಳ ಮತ್ತು ಇತರ ಇಸ್ಲಾಂಯೇತರ ಸಮುದಾಯಗಳ ಹಕ್ಕುಗಳ ಉಲ್ಲಂಘನೆ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಮೃತದೇಹ ಶಾಂಭವಿ ಲಾಡ್ಜ್ ನಿಂದ ಮಣಿಪಾಲ ಆಸ್ಪತ್ರೆ ಶವಾಗಾರಕ್ಕೆ ರವಾನೆ
ಶಾಸಕಾಂಗಕ್ಕೆ ಸವಾಲೊಡ್ಡುವ ಅಥವಾ ಪ್ರಚಾರಕ್ಕೆ ಅಕಾಶ ಕೊಡುವಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದಿರುವ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠ, ಈ ಬಗ್ಗೆ ಸಂಸತ್ ಗೆ ನಿರ್ದೇಶನ ನೀಡುವುದಿಲ್ಲ ಎಂದಿದೆ. ಅಷ್ಟೇ ಅಲ್ಲ ಅರ್ಜಿದಾರ, ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯಗೆ ಸೂಕ್ತ ವೇದಿಕೆಯನ್ನು ಸಂಪರ್ಕಿಸುವಂತೆ ಸೂಚಿಸಿದೆ.
“ಇದೊಂದು ನಿರ್ದಿಷ್ಟವಾದ ಪ್ರಕರಣವೇ? ಒಂದು ವೇಳೆ ನೀವು ಕಾನೂನು ಪ್ರಕಾರ ಮೊಕದ್ದಮೆ ಹೂಡಿದ್ದರೆ, ಆ ಪ್ರಕರಣದ ಕುರಿತ ಸತ್ಯಾಂಶಗಳನ್ನು ನಮಗೆ ಕೊಡಿ. ನಾವು ಶಾಸಕಾಂಗಕ್ಕೆ ಸವಾಲೊಡ್ಡುವಂತಹ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಜಸ್ಟೀಸ್ ಚಂದ್ರಚೂಡ್ ತಿಳಿಸಿದ್ದಾರೆ.
“ನಿಮ್ಮ ಆಸ್ತಿಯನ್ನು ಲಪಟಾಯಿಸಲಾಗಿದೆಯೇ? ಅಥವಾ ನಿಮ್ಮನ್ನು ಹೊರ ಹಾಕಲಾಗಿದೆಯೇ ಎಂದು ಜಸ್ಟೀಸ್ ಸೂರ್ಯ ಕಾಂತ್ ಕಟುವಾಗಿ ಅರ್ಜಿದಾರ ಉಪಾಧ್ಯಾಯಗೆ ಪ್ರಶ್ನಿಸಿರುವುದಾಗಿ ವರದಿ ವಿವರಿಸಿದೆ.
“ಸಾಂವಿಧಾನಿಕವಾಗಿ ಸಂಸತ್ ಕಾರ್ಯವ್ಯಾಪ್ತಿಯೊಳಗೆ ಎಲ್ಲರಿಗೂ ಸಾಮಾನ್ಯ ಕಾನೂನು ಇರಬೇಕೆಂದು ನೀವು ಹೇಳುತ್ತಿದ್ದೀರಿ. ಆದರೆ ನಾವು ಸಂಸತ್ ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಪೀಠ ಹೇಳಿದೆ.
ಕಾನೂನಿನ ಸಾಂವಿಧಾನಿಕ ಮೌಲ್ಯದ ಬಗ್ಗೆ ನಾವು ತುಂಬಾ ಜಾಗರೂಕರಾಗಿರಬೇಕು. ಶಾಸಕಾಂಗದಿಂದ ಜಾರಿಯಾದ ಕಾನೂನನ್ನು ನೀವು ಪ್ರಶ್ನಿಸುವಾಗಲೂ ಕೂಡಾ ನೀವು ತುಂಬಾ ಜಾಗರೂಕರಾಗಿರಬೇಕು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.