Advertisement
ತಲಾಖ್, ಬಹುಪತ್ನಿತ್ವ, ನಿಕಾಹ್ ಹಲಾಲಾವನ್ನು (ವಿಚ್ಛೇದಿತ ಪತ್ನಿ ಮತ್ತೆ ಆತನನ್ನೇ ಪತಿಯನ್ನಾಗಿ ಸ್ವೀಕರಿಸಬೇಕಿದ್ದರೆ, ಬೇರೊಬ್ಬನನ್ನು ಮರುಮದುವೆಯಾಗಿ ಆತನಿಗೆ ವಿಚ್ಛೇದನ ನೀಡಿದ ಬಳಿಕವೇ ಮಾಜಿ ಪತಿಯನ್ನು ವರಿಸುವ ಪದ್ಧತಿ) ಪ್ರಶ್ನಿಸಿ ಕೆಲವು ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ, ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ, ಇದನ್ನು ವಿರೋಧಿಸಿದ್ದ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ಶರಿಯಾ ಕಾನೂನಿನಲ್ಲಿರುವ ಈ ಪದ್ಧತಿಗಳ ವಿಚಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಲ್ಲ ಎಂದಿತ್ತು. ತ್ರಿವಳಿ ತಲಾಖ್ ಸಹಿತ ವಿವಾದಾತ್ಮಕ ಪದ್ಧತಿಯಲ್ಲಿನ ಕಾನೂನಾತ್ಮಕ ವಿಚಾರಗಳನ್ನಷ್ಟೇ ನಾವು ಪರಿಗಣಿಸಿ, ತೀರ್ಪು ನೀಡುತ್ತೇವೆ. ಇತರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಈ ಹಿಂದೆಯೇ ನ್ಯಾಯಾಲಯ ತಿಳಿಸಿತ್ತು. Advertisement
ತ್ರಿವಳಿ ತಲಾಖ್ ವಿಚಾರಣೆ ಸಂವಿಧಾನ ಪೀಠಕ್ಕೆ ವರ್ಗ
03:02 AM Mar 31, 2017 | Karthik A |
Advertisement
Udayavani is now on Telegram. Click here to join our channel and stay updated with the latest news.