Advertisement

ಎಜಿಆರ್‌ ವಿಚಾರ ಮತ್ತೆ ಪರಿಶೀಲಿಸಲ್ಲ ; ಸುಪ್ರೀಂ ಕೋರ್ಟ್‌ ಸ್ಪಷ್ಟ ಎಚ್ಚರಿಕೆ

01:22 AM Mar 19, 2020 | Hari Prasad |

ಹೊಸದಿಲ್ಲಿ: ಬಾಕಿ ಇರುವ ಸರಿದೂಗಿಸಲ್ಪಟ್ಟ ಒಟ್ಟು ಆದಾಯವನ್ನು (ಅಡ್ಜೆಸ್ಟೆಡ್‌ ಗ್ರಾಸ್‌ ಇನ್ಕಂ- ಎಜಿಆರ್‌) ಮತ್ತೂಮ್ಮೆ ಲೆಕ್ಕ ಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ದೇಶದ ಎಲ್ಲ ಟೆಲಿಕಾಂ ಕಂಪೆನಿಗಳು ಹಾಗೂ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸ್ಪಷ್ಟ ಎಚ್ಚರಿಕೆ ನೀಡಿದೆ.

Advertisement

ಟೆಲಿಸಂವಹನ ಕಂಪೆನಿಗಳು ತಮ್ಮ ಎಜಿಆರ್‌ ಬಾಕಿಯನ್ನು ಮುಂದಿನ 20 ವರ್ಷಗಳಲ್ಲಿ ಪಾವತಿಸುವಂತೆ ಸೂಚಿಸಲು ಕೋರಿ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, 20 ವರ್ಷಗಳ ಕಾಲಾವಕಾಶ ನೀಡುವುದು ಅಸಮಂಜಸ. ನ್ಯಾಯಾಲಯವು ಈಹಿಂದೆ ನೀಡಿರುವ ಆದೇಶದಲ್ಲಿ ತಿಳಿಸಿದ ಅವಧಿಯೊಳಗೇ ಎಲ್ಲ ಸಂಸ್ಥೆಗಳು ಬಾಕಿ ಮೊತ್ತ ಪಾವತಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಇದೇ ವೇಳೆ ಅಲ್ಲದೆ, ಎಜಿಆರ್‌ ಸಮಸ್ಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಲೇಖನಗಳ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ನ್ಯಾಯಪೀಠ, ಮುಂದೆ ಅಂತಹ ಲೇಖನಗಳು ಪ್ರಕಟಗೊಂಡರೆ ಅದಕ್ಕೆ ಟೆಲಿಕಾಂ ಕಂಪೆನಿ ಹೊಣೆಯಾಗಬೇಕಾಗುತ್ತದೆ ಮತ್ತು ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಇನ್ನೊಂದೆಡೆ ಲೋಕಸಭೆ ಅಧಿವೇಶನದಲ್ಲೂ ಬುಧವಾರ ಈ ವಿಷಯ ಕುರಿತು ಡಿಎಂಕೆ ಸಂಸದರು ಮತ್ತು ದೂರಸಂಪರ್ಕ ಸಚಿವರ ನಡುವೆ ತೀವ್ರ ವಾಗ್ವಾದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next