Advertisement
ಸಂಪೂರ್ಣ ವಿವರ ಕೊಡಿಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಶಾಸಕ ಅಥವಾ ಸಂಸದರು ನಿಮ್ಮಲ್ಲಿ ಎಷ್ಟಿದ್ದಾರೆ, ಇನ್ನೂ ಎಷ್ಟು ಮಂದಿ ವಿರುದ್ಧ ಪ್ರಕರಣಗಳು ಬಾಕಿ ಇವೆ, ಕ್ರಿಮಿನಲ್ ಕೇಸು ಬಾಕಿ ಇದ್ದ ಹೊರತಾಗಿಯೂ ಅವರಿಗೆ ನೀವು ಟಿಕೆಟ್ ನೀಡಿದ್ದೇಕೆ- ಈ ಕುರಿತು ಮಾಹಿತಿ ನೀಡಿ ಎಂದು ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಗಣಿ ಅಕ್ರಮದಲ್ಲಿ ಮೊಕದ್ದಮೆ ಎದುರಿಸುತ್ತಿರುವ ಸಚಿವ ಆನಂದ್ ಸಿಂಗ್‌ಗೆ ಅರಣ್ಯ ಖಾತೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ಬರುವ ಮೊದಲೇ ಪ್ರಧಾನಿ ಮೋದಿ ಅದನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Related Articles
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಬಿಜೆಪಿ ಸ್ವಾಗತಿಸಿದೆ. ಚುನಾವಣ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಈ ನಿರ್ದೇಶನ ಮತ್ತಷ್ಟು ಬಲಪಡಿಸಿದೆ. ಜತೆಗೆ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮತದಾರರನ್ನು ಜಾಗೃತಗೊಳಿಸಿದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
Advertisement
ಗೆಲ್ಲುವ ಅಂಶವೇ ಪ್ರಧಾನವಲ್ಲಚುನಾವಣೆಯಲ್ಲಿ ನಿಗದಿತ ಅಭ್ಯರ್ಥಿಗಳು ಗೆಲ್ಲಲೇಬೇಕು. ಹಿಂದಿನ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ ಎಂಬ ಅಂಶಗಳು ಪ್ರಧಾನವಾಗ ಕೂಡದು. ಅವರು ಸಮಾಜಕ್ಕಾಗಿ ನೀಡಿರುವ ಕೊಡುಗೆ ಏನು ಎಂಬುದು ಅವರ ಸಾಧನೆ ನಿರ್ಧರಿಸುವ ಅಂಶವಾಗಬೇಕು ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಅಭಿಪ್ರಾಯಪಟ್ಟಿದೆ. ಒಂದೊಮ್ಮೆ ರಾಜಕೀಯ ಪಕ್ಷಗಳು ಮಾಹಿತಿ ನೀಡದಿದ್ದರೆ ಮತ್ತು ಈ ನಿರ್ದೇಶನವನ್ನು ಜಾರಿಗೊಳಿಸಲು ವಿಫಲವಾದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಚುನಾವಣಾ ಆಯೋಗ ಪರಿಗಣಿಸಬೇಕು ಎಂದೂ ಹೇಳಿದೆ. ನಿರ್ದೇಶನಗಳು
1. ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು (ಅಪರಾಧಗಳ ಸ್ವರೂಪ, ಆರೋಪ ಸಾಬೀತು, ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮತ್ತು ಕೇಸು ಸಂಖ್ಯೆ) ತಮ್ಮ ವೆಬ್‌ಸೈಟ್‌ಗಳಲ್ಲಿ ವಿವರವಾಗಿ ಪ್ರಕಟಿಸಬೇಕು. 2. ಚುನಾವಣೆ ಗೆಲುವು ಹೊರತಾಗಿ ಅಭ್ಯರ್ಥಿಯು ಸ್ಪರ್ಧೆಗೆ ಅರ್ಹ ಎಂದು ಪರಿಗಣಿಸಲು ಇರುವ ಕಾರಣಗಳೇನು?- ಈ ಮಾಹಿತಿಯನ್ನು ಒಂದು ಸ್ಥಳೀಯ ಪತ್ರಿಕೆ, ಒಂದು ರಾಷ್ಟ್ರೀಯ ಪತ್ರಿಕೆ, ಫೇಸ್‌ಬುಕ್, ಟ್ವಿಟರ್ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿನ ಪಕ್ಷಗಳ ಅಧಿಕೃತ ವೇದಿಕೆಯಲ್ಲಿ ಪ್ರಕಟಿಸಬೇಕು. 3. ಅಭ್ಯರ್ಥಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಿದ 48 ತಾಸುಗಳ ಒಳಗಾಗಿ ಅಥವಾ ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನಕ್ಕೆ 2 ವಾರ ಮುಂಚಿತವಾಗಿ ಈ ಮಾಹಿತಿ ಪ್ರಕಟಗೊಳ್ಳಬೇಕು 4. ಪ್ರಸ್ತುತ ನಿರ್ದೇಶನದಲ್ಲಿ ಸೂಚಿಸಿರುವ ಅಂಶಗಳನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಿದ 72 ತಾಸುಗಳ ಒಳಗಾಗಿ ಚುನಾವಣ ಆಯೋಗಕ್ಕೆ ಸಲ್ಲಿಸಬೇಕು. 5. ನ್ಯಾಯಾಲಯದ ನಿರ್ದೇಶನದ ಅನುಸಾರ ಮಾಹಿತಿ ನೀಡಲು ರಾಜಕೀಯ ಪಕ್ಷಗಳು ವಿಫಲವಾದರೆ, ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಿದ್ದು, ಚುನಾವಣ ಆಯೋಗ ಅದನ್ನು ಕೂಡಲೇ ಕೋರ್ಟ್‌ಗಮನಕ್ಕೆ ತರಬೇಕು.