Advertisement

ಅರಾವಳಿ’ಅರಣ್ಯ ಪ್ರದೇಶದಲ್ಲಿರುವ ಮನೆಗಳ ಒತ್ತುವರಿ ತೆರವು ತಡೆಗೆ ಸುಪ್ರೀಂ ಕೋರ್ಟ್ ನಕಾರ

09:18 PM Jun 17, 2021 | Team Udayavani |

ನವದೆಹಲಿ: ಹರ್ಯಾಣದ ಖೋರಿ ಎಂಬ ಹಳ್ಳಿಯ ಬಳಿಯಿರುವ ಅರಾವಳಿ ಅರಣ್ಯ ಪ್ರದೇಶದಲ್ಲಿ ಇರುವ 10 ಸಾವಿರ ಒತ್ತುವರಿ ಮನೆಗಳನ್ನು ತೆರವುಗೊಳಿಸುವಂತೆ ತಾನು ಹಿಂದೆ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Advertisement

ಜೂ. 7ರಂದು ಈ ಕುರಿತಂತೆ ಹರ್ಯಾಣ ಹಾಗೂ ಫ‌ರಿದಾಬಾದ್‌ ನಗರಸಭೆಗಳಿಗೆ ನ್ಯಾಯಪೀಠ ಆದೇಶ ನೀಡಿತ್ತು. ಅದಕ್ಕೆ ತಡೆ ನೀಡಲು ಸಲ್ಲಿಸಲಾಗಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾ. ಎ.ಎಂ. ಖಾನ್ವಿಲ್ಕರ್‌ ಹಾಗೂ ದಿನೇಶ್‌ ಮಹೇಶ್ವರಿ, “”ನಮ್ಮ ಅರಣ್ಯ ಪ್ರದೇಶಗಳು ಸ್ವತ್ಛವಾಗಿರಬೇಕು ಹಾಗೂ ಮಾನವನ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಹೀಗಾಗಿ, ಅರಾವಳಿ ಕಾಡಂಚಿನಲ್ಲಿರುವ 10,000 ಮನೆಗಳು ತೆರವುಗೊಳ್ಳುವುದು ಪಕ್ಕಾ ಆಗಲಿದೆ.

ಇದನ್ನೂ ಓದಿ :ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಭಾರತೀಯ ಹಣ ಗಣನೀಯ ಹೆಚ್ಚಳ: ಎಸ್‌ಎನ್‌ಬಿ ವರದಿ

Advertisement

Udayavani is now on Telegram. Click here to join our channel and stay updated with the latest news.

Next