ನವದೆಹಲಿ:ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ 14.5ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ ಮಾಡಿ ಸುಪ್ರೀಂಕೋರ್ಟ್ ಮುಖ್ಯ ನ್ಯಾ.ದೀಪಕ್ ಮಿಶ್ರಾ, ನ್ಯಾ.ಅಮಿತಾವ್ ರಾಯ್ ಮತ್ತು ನ್ಯಾ.ಎಎಂ. ಕಾನ್ವಿಲ್ಕರ್ ವುಳ್ಳ ತ್ರಿಸದಸ್ಯ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.
192ಟಿಎಂಸಿ ನೀರು ಬಿಡುವ ಬದಲು 177 ಟಿಎಂಸಿ ನೀರನ್ನು ತಮಿಳುನಾಡಿಗೆ
(ಇದನ್ನೂ ಓದಿ: ಕಾವೇರಿ ಪಾಲೆಷ್ಟು?ಇಂದು ಸುಪ್ರೀಂನಲ್ಲಿ ಅಂತಿಮ ತೀರ್ಪು) ಬಿಡಲು ಪೀಠ ಆದೇಶ ನೀಡಿದೆ. ತಮಿಳುನಾಡಿಗೆ 14.5 ಟಿಎಂಸಿ ನೀರನ್ನು ಕಡಿತಗೊಳಿಸಿದೆ.
ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿದಂತಾಗಿದೆ. 1892 ಹಾಗೂ 1924ರ ಎರಡೂ ಒಪ್ಪಂದಗಳೂ ಸಿಂಧುವಾಗಿದೆ ಎಂದು ಹೇಳಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದು ಸ್ಪಷ್ಟವಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಕೇಂದ್ರವೇ ಮಂಡಳಿ ರಚಿಸಬೇಕೆಂಬ ಕರ್ನಾಟಕದ ವಾದಕ್ಕೆ ಗೆಲುವು ಸಿಕ್ಕಂತಾಗಿದೆ.
ಮುಂದಿನ 15 ವರ್ಷಗಳಿಗೆ ಟ್ರಿಬ್ಯೂನಲ್ ತೀರ್ಪು ಅನ್ವಯ. 15 ವರ್ಷಗಳ ಬಳಿಕ ಈ ತೀರ್ಪನ್ನು ಸುಪ್ರೀಂಕೋರ್ಟ್ ಮರುಪರಿಶೀಲಿಸಬಹುದು. ಬೆಂಗಳೂರಿಗೆ 4.75ಟಿಎಂಸಿ ನೀರು ಹಂಚಿಕೆಗೆ ಸುಪ್ರೀಂ ಆದೇಶ ನೀಡಿದೆ.
ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶದ ವಿಸ್ತರಣೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಸಮಾನ ಹಂಚಿಕೆ ತತ್ವ ಪಾಲಿಸುವಂತೆ ಎರಡೂ ರಾಜ್ಯಗಳಿಗೆ ಸೂಚಿಸಿದೆ.