Advertisement

ತಟಸ್ಥ ಉಲ್ಲೇಖ ವ್ಯವಸ್ಥೆ ಜಾರಿಗೆ ತಂದ ಸುಪ್ರೀಂ ಕೋರ್ಟ್‌

11:33 PM Feb 23, 2023 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ತನ್ನ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆ (ನ್ಯೂಟ್ರಲ್‌ ಸೈಟೇಶನ್‌ ಸಿಸ್ಟಂ) ಜಾರಿಗೆ ತಂದಿದೆ ಎಂದು ಸಿಜೆಐ ಡಿ.ವೈ. ಚಂದ್ರ­ಚೂಡ್‌ ಗುರುವಾರ ತಿಳಿಸಿದರು.

Advertisement

ನ್ಯಾಯಾಲಯ ನೀಡುವ ಮತ್ತು ಈಗಾಗಲೇ ನೀಡಿರುವ ಎಲ್ಲ ತೀರ್ಪುಗಳಲ್ಲಿ ತಟಸ್ಥ ಉಲ್ಲೇಖ ವ್ಯವಸ್ಥೆ ಇರಲಿದೆ. 2014 ರಿಂದ ಇಂದಿನವರೆಗಿನ ತೀರ್ಪುಗಳು ಒಳ ಗೊಂಡಿರುವ ಮೊದಲ ಹಂತದ ಜಾರಿ ಈಗಾಗಲೇ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 1995ರಿಂದ 2013ರ ವರೆಗಿನ ತೀರ್ಪುಗಳಿಗೆ ಮತ್ತು 3ನೇ ಹಂತ­ದಲ್ಲಿ 1950ರಿಂದ 1994 ರ ವರೆಗೆ ನೀಡಲಾದ ತೀರ್ಪುಗಳಿಗೆ ಈ ವ್ಯವಸ್ಥೆ ಬರಲಿದೆ ಎಂದು ತಿಳಿಸಿದರು.

ಏನಿದು ವ್ಯವಸ್ಥೆ?
ತನ್ನ ತೀರ್ಪಿಗೆ ನ್ಯಾಯಾ ಲಯ ನೀಡುವ ಅನನ್ಯ ಅನುಕ್ರಮ ಸಂಖ್ಯೆಯೇ ತಟಸ್ಥ ಉಲ್ಲೇಖ ವ್ಯವಸ್ಥೆ. ಮಾಧ್ಯಮ­ದಲ್ಲಿ ತೀರ್ಪು ಪ್ರಕಟವಾದರೂ ಬದಲಾಗದೇ ಇರುವ ಉಲ್ಲೇಖ ಸಂಖ್ಯೆಯನ್ನು ತೀರ್ಪಿನ ಜತೆಗೆ ಪ್ರಕಟಿಸುವ ಮೂಲಕ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next