Advertisement

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

12:21 PM Nov 19, 2024 | Team Udayavani |

ತಿರುವನಂತಪುರಂ: ಅತ್ಯಾ*ಚಾರ ಆರೋಪ ಎದುರಿಸುತ್ತಿದ್ದ ಮಾಲಿವುಡ್ ಹಿರಿಯ ನಟ ಸಿದ್ದಿಕ್ (Malayalam actor Siddique) ‌ಅವರಿಗೆ ಮಂಗಳವಾರ (ನ.19ರಂದು) ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Advertisement

ಈ ಹಿಂದೆ ನ್ಯಾ. ಬೇಲಾ ಎಂ.ತ್ರಿವೇದಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠ, ವಿಚಾರಣೆಗೆ ಸಹಕರಿಸುವಂತೆ ಮತ್ತು ಬಂಧನದಿಂದ ರಕ್ಷಣೆ ನೀಡಿ ಸೆ.30ರಂದು ಮಧ್ಯಂತರ ಆದೇಶ ನೀಡಿತ್ತು.

ಇತ್ತೀಚೆಗೆ ನಟನ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಕೇಳಿದ್ದರು. ಈ ಕಾರಣದಿಂದ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್‌ ಮತ್ತಷ್ಟು ವಿಸ್ತರಿಸಿತ್ತು.

ಮಂಗಳವಾರ ಸುಪ್ರೀಂ ಕೋರ್ಟ್‌ ನಟ ಸಿದ್ದಿಕ್ ಅವರಿಗೆ ಕೆಲ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹಿರಿಯ ನಟ ತನ್ನ ಪಾಸ್‌ಪೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ತನಿಖಾಧಿಕಾರಿಗೆ ತನಿಖೆಗೆ ಸಹಕರಿಸಬೇಕೆಂದು ಸೂಚನೆ ನೀಡಿದೆ.

ದೂರುದಾರೆ 13 ಜನರ ವಿರುದ್ಧ ಕಿರುಕುಳ ಆರೋಪವನ್ನು 2018ರಲ್ಲಿ ಫೇಸ್‌ ಬುಕ್‌ನಲ್ಲಿ ಮಾಡಿರುವುದು ನ್ಯಾಯಾಲಯ ಗಮನಿಸಿದೆ. 8 ವರ್ಷಗಳ ಕಾಲ ಪೊಲೀಸರನ್ನು ಯಾಕೆ ಸಂಪರ್ಕಿಸಿಲ್ಲ. ಹೇಮಾ ಸಮಿತಿಗೂ ಯಾಕೆ ತಿಳಿಸಿಲ್ಲ ಎಂದು ಕೋರ್ಟ್‌ ಪ್ರಶ್ನಿಸಿದೆ.

Advertisement

ಪ್ರಕರಣವೇನು?:

2016ರ ಜನವರಿ 28ರಂದು ತಿರುವನಂತಪುರಂನ ಹೊಟೇಲ್‌ನಲ್ಲಿ ಸಿನಿಮಾವೊಂದರ ಪ್ರಿವ್ಯೂ ಶೋ ಬಳಿಕ ಸಿದ್ದೀಕ್‌ ತನ್ನ ಮೇಲೆ ಅತ್ಯಾ*ಚಾರವೆಸಗಿದ್ದರು ಎಂದು ನಟಿಯೊಬ್ಬರು ಆರೋಪಿಸಿದ್ದರು. ಪೊಲೀಸರು ನಟನ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದರು.

ಈ ಆರೋಪದ ಬಳಿಕ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿದ್ದ ಸಿದ್ದೀಕ್‌ ಹೈಕೋರ್ಟ್‌ಗೆ ಸೆ.24 ರಂದು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next