Advertisement

Mines ಕಂಪೆನಿಗಳಿಂದ ತೆರಿಗೆ ಬಾಕಿ ಪಡೆಯಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಅಧಿಕಾರ

12:08 AM Aug 15, 2024 | Team Udayavani |

ಹೊಸದಿಲ್ಲಿ: ಗಣಿ ಕಂಪೆನಿಗಳು ಬಾಕಿ ಉಳಿಸಿ ಕೊಂಡಿರುವ ರಾಯಧನವನ್ನು ಖನಿಜ ಸಂಪದ್ಭರಿತ ರಾಜ್ಯಗಳು ಸಂಗ್ರಹಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

Advertisement

ಅಲ್ಲದೇ 2005ರ ಎಪ್ರಿಲ್‌ 1ರಿಂದಲೇ ಅನ್ವಯ ವಾಗುವಂತೆ ರಾಜ್ಯಗಳು ಬಾಕಿಯುಳಿದಿರುವ ರಾಯಧನ ಮತ್ತು ಲೆವಿ ಹೇರಬಹುದು ಎಂದು ನ್ಯಾಯಪೀಠ ಹೇಳಿದೆ. ಬಾಕಿ ಉಳಿಸಿಕೊಂಡಿರುವ ಯಾವುದೇ ಪಾವತಿ ಮೇಲೆಯೂ ದಂಡ ವಿಧಿಸದಂತೆಯೂ ಸೂಚಿಸಿದೆ.

1989ರಿಂದ ಗಣಿ ಮತ್ತು ಖನಿಜಗಳ ಮೇಲೆ ಹೇರಲಾಗಿರುವ ರಾಯಧನ ಲೆವಿ ರೀಫ‌ಂಡ್‌ಗೆ ರಾಜ್ಯಗಳ ಒತ್ತಾಯವನ್ನು ಕೇಂದ್ರ ಸರಕಾರ ವಿರೋಧಿಸಿದೆ. ರೀಫ‌ಂಡ್‌ ಮಾಡಿದರೆ ಸಾರ್ವಜನಿಕ ಕಂಪೆನಿಗಳು ಮತ್ತು ಜನರ ಮೇಲೆ ಪರಿಣಾಮ ಬೀರಲಿದೆ. ಆರಂಭದ ಲೆಕ್ಕಾಚಾರದ ಪ್ರಕಾರ, 70 ಸಾವಿರ ಕೋಟಿ ರೂ. ಖಜಾನೆಗೆ ಹೊರೆಯಾಗಲಿದೆ ಎಂದು ಕೇಂದ್ರ ತನ್ನ ವಾದವನ್ನು ಮಂಡಿಸಿತಾದರೂ ನ್ಯಾಯಪೀಠ ಇದನ್ನು ಒಪ್ಪಲಿಲ್ಲ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಖನಿಜ ಸಂಪದ್ಭರಿತ ರಾಜ್ಯಗಳಾದ ಒಡಿಶಾ, ಝಾರ್ಖಂಡ್‌, ಪಶ್ಚಿಮ ಬಂಗಾಲ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನಗಳಿಗೆ ಲಾಭವಾಗಲಿದೆ. ಈ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಗಣಿ ಕಂಪೆನಿಗಳ ಮೇಲೆ ಹೆಚ್ಚುವರಿ ಲೆವಿಯನ್ನು ವಿಧಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next