ನವದೆಹಲಿ:ಮುಸ್ಲಿಂ ಸಮುದಾಯದಲ್ಲಿರುವ ವಿವಾದಿತ ತ್ರಿವಳಿ ತಲಾಖ್ ಪದ್ಧತಿ ಕುರಿತು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮಂಗಳವಾರ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದು, ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಬಹುಮತದ (3:2) ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿದೆ.
ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಉದಯ್ ಲಲಿತ್, ಕುರಿಯನ್ ಜೋಸೆಫ್ ಹಾಗೂ ರೋಹಿಂಗ್ಟನ್ ಅವರು ಮುಸ್ಲಿಂ ವೈಯಕ್ತಿಕ
(ಇದನ್ನೂ ಓದಿ: ನ್ಯಾಯದ ನಿರೀಕ್ಷೆಯಲ್ಲಿ…) ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಹೇಳಿ ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿ ಬಹುಮತದ ತೀರ್ಪು ನೀಡಿದ್ದಾರೆ.
ತ್ರಿವಳಿ ತಲಾಖ್ ಮಾನ್ಯತೆಯನ್ನು ಎತ್ತಿಹಿಡಿದಿದೆ. ಅಲ್ಲದೇ ತ್ರಿವಳಿ ತಲಾಖ್ ಗೆ 6 ತಿಂಗಳ ಕಾಲ ತಡೆಯಾಜ್ಞೆ ನೀಡಿ, ತ್ರಿವಳಿ ತಲಾಖ್ ಕುರಿತು ಸಂಸತ್ 6 ತಿಂಗಳೊಳಗೆ ಕಾನೂನನ್ನು ಜಾರಿಗೆ ತರಬೇಕು ಎಂದು ನಿರ್ದೇಶನ ನೀಡಿದೆ.
ತ್ರಿವಳಿ ತಲಾಖ್ ಕುರಿತಂತೆ ಬೇಸಗೆ ರಜೆಯಲ್ಲಿ ಆರು ದಿನಗಳ ನಿರಂತರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪಂಚಸದಸ್ಯ ಪೀಠ, ಮೇ 18ರಂದು ತೀರ್ಪನ್ನು ಕಾಯ್ದಿರಿಸಿತ್ತು.
ತ್ರಿವಳಿ ತಲಾಖ್ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಹಾಗೂ ನ್ಯಾ.ಅಬ್ದುಲ್ ನಜೀರ್ ಅವರು ತ್ರಿವಳಿ ತಲಾಖ್ ಮಾನ್ಯತೆಯನ್ನು ಎತ್ತಿಹಿಡಿದಿದ್ದರು, ಜಸ್ಟೀಸ್ ರೋಹಿಂಟನ್ ನಾರಿಮನ್, ಉದಯ್ ಲಲಿತ್ ಹಾಗೂ ಜೋಸೆಫ್ ಕುರಿಯನ್ನು ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿ, ಮುಂದಿನ 6 ತಿಂಗಳೊಳಗೆ ತ್ರಿವಳಿ ತಲಾಖ್ ಅನ್ನು ನಿಷೇಧಿಸಿ ಕಾನೂನನ್ನು ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲಿಯವರೆಗೆ ತ್ರಿವಳಿ ತಲಾಖ್ ಜಾರಿಯಲ್ಲಿ ಇರುವುದಿಲ್ಲ ಎಂದು ಹೇಳಿದೆ.