ಹೊಸದಿಲ್ಲಿ: ಸಂಸತ್‌ನಲ್ಲಿ ವಿಧೇಯಕಗಳ ಬಗ್ಗೆ ಉಪಯುಕ್ತ ಚರ್ಚೆಯಾಗುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ರವಿವಾರ ವಿಷಾದಿಸಿದ್ದಾರೆ. ವಿಧೇಯಕಗಳ ಬಗ್ಗೆ ಸೂಕ್ತ ರೀತಿಯಲ್ಲಿ ಚರ್ಚೆ ನಡೆದು, ಅದರಲ್ಲಿದ್ದ ಲೋಪಗಳನ್ನು ತಿದ್ದದೇ ಹೋದರೆ ಅಸ್ಪಷ್ಟ ಕಾನೂನುಗಳಾಗುತ್ತವೆ. ಇದರಿಂದಾಗಿ ನ್ಯಾಯಾಲಯಗಳ ಮೇಲೆ ಹೊರೆ ಹೆಚ್ಚಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಎಸೋಸಿಯೇಷನ್ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
“ಸಂಸತ್‌ನಲ್ಲಿ ನಿಗದಿತ ವಿಚಾರಗಳ ಬಗ್ಗೆ ಮಂಡಿಸಲಾಗುವ ವಿಧೇಯಕದ ಬಗ್ಗೆ ಸಮಗ್ರ ವಾಗಿ ಚರ್ಚೆಯಾಗಬೇಕು. ವಿಚಾರ ಮಂಡನೆ ಯಾದಾಗ ಅದರಲ್ಲಿನ ನ್ಯೂನತೆಗಳ ಬಗ್ಗೆ ಚರ್ಚೆಯಾಗಿ, ಪರಿಹಾರ ಸೂತ್ರ ಲಭಿಸುತ್ತದೆ. ಆದರೆ, ಸದ್ಯ ಸಂಸತ್‌ನಲ್ಲಿ ವಿಧೇಯಕಗಳ ಬಗ್ಗೆ ಅಪೂರ್ಣ ಚರ್ಚೆಗಳು ಉಂಟಾ ಗುತ್ತವೆ. ಅದಕ್ಕೆ ಸ್ಪಷ್ಟೀಕರಣ ಕೋರಿ ನ್ಯಾಯಾಲಯದ ಬಾಗಿಲು ತಟ್ಟು ತ್ತಾರೆ. ಇದು ವಿನಾಕಾರಣವಾಗಿ ನ್ಯಾಯಾಂಗದ ಮೇಲೆ ಹೊರೆ ಹೆಚ್ಚು ಮಾಡಿ ದಂತಾಗುತ್ತದೆ’ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯ ನಂತರ ನ್ಯಾಯವಾದಿಗಳು ಸಂಸತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ತಿಳಿವಳಿಕೆ ಪೂರ್ಣ ಚರ್ಚೆಗೆ ಕಾರಣರಾಗಬೇಕು ಎಂದರು. ನ್ಯಾಯವಾದಿಗಳು ಮತ್ತೂಮ್ಮೆ ತಮ್ಮನ್ನು ವಿಧೇಯಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವು ದರ ಮೂಲಕ ಸಾರ್ವಜನಿಕರಿಗೆ ಅನುಕೂಲವಾ ಗುವಂತೆ ವಿಧೇಯಕಗಳು ಮತ್ತು ಕಾಯ್ದೆಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು ಎಂದರು.