ಹೊಸದಿಲ್ಲಿ, : “ಮೂರು ರೈತ ಕಾಯ್ದೆ ಜಾರಿಯನ್ನು ನೀವು ತಡೆಯದಿದ್ದರೆ ನಾವು ಆ ಹೆಜ್ಜೆ ಇರಿಸು ತ್ತೇವೆ’ ಎಂದು ಸೋಮವಾರ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಕಠಿನ ಸೂಚನೆ ನೀಡಿದೆ. ರೈತರ ಪ್ರತಿಭಟನೆ ವಿಚಾರವನ್ನು ನಿಭಾಯಿಸುತ್ತಿರುವ ಸರಕಾರದ ಕ್ರಮ ನಿರಾಶಾದಾಯಕ ಎಂದು ಮುಖ್ಯ ನ್ಯಾ|ಮೂ| ಎಸ್. ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಆಕ್ಷೇಪಿಸಿದ್ದು, ವಿವಾದಿತ ಕಾಯ್ದೆಗಳು ಮತ್ತು ಸಂಬಂಧಿತ ವಿಚಾರಗಳ ಬಗ್ಗೆ ಮಂಗಳವಾರ ತೀರ್ಪು ನೀಡುವುದಾಗಿ ಹೇಳಿದೆ.
ಏನಾದರೂ ಅನಾ ಹುತ ವಾದರೆ ನೀವೆಲ್ಲರೂ ಹೊಣೆಗಾರರಾಗಬೇಕಾಗುತ್ತದೆ. ನಮ್ಮಿಂದ ರಕ್ತಪಾತ ಅಥವಾ ಇನ್ನಾವುದೇ ಸಮಸ್ಯೆ ಉಂಟಾಗುವುದು ನಮಗೆ ಬೇಕಾಗಿಲ್ಲ ಎಂದು ಸಿಜೆಐ ಹೇಳಿ ದರು.
“ನಿಮ್ಮ ಉಪನ್ಯಾಸ ಬೇಡ’ :
ಸಮಸ್ಯೆ ಬಗೆಹರಿಸುವಲ್ಲಿ ಸರಕಾರ ಏಕೆ ಬಿಗು ಮಾನ ಪ್ರದರ್ಶಿಸಬೇಕು ಎಂದು ಸಿಜೆಐ ಅವರು ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಅವ ರನ್ನು ನೇರವಾಗಿ ಪ್ರಶ್ನಿಸಿದರು. ಸದ್ಯ ನಡೆಯುತ್ತಿರುವ ಮಾತುಕತೆಗಳ ವಿವರ ಕೋರ್ಟ್‌ಗೆ
ಸಲ್ಲಿಸಲು ಇನ್ನೂ ಹೆಚ್ಚಿನ ಸಮಯ ಬೇಕು ಅಟಾರ್ನಿ ಜನರಲ್ ಹೇಳಿದ್ದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ, “ನಿಮ್ಮ ಕಡೆಯಿಂದ ಸರಿಯಾದ ನಿರ್ಧಾರ ಕೈಗೊಳ್ಳುವುದು ಕಾಣುತ್ತಿಲ್ಲ. ಹೀಗಾಗಿ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದರು.
ಅದೇ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ಆದೇಶ ನೀಡಲು ಅವಸರ ಏಕೆ’ ಎಂದು ಕೇಳಿದ್ದಕ್ಕೆ ಕ್ರುದ್ಧಗೊಂಡ ನ್ಯಾ| ಬೋಬ್ಡೆ, “ತಾಳ್ಮೆಯ ಬಗ್ಗೆ ನಿಮ್ಮ ಉಪನ್ಯಾಸ ಬೇಡ. ಸಮಸ್ಯೆ ಪರಿಹರಿಸಲು ಸಾಕಷ್ಟ ಸಮಯಾವಕಾಶ ನೀಡಿದ್ದೇವೆ. ಹಿಂದಿನ ವಿಚಾರಣೆ ವೇಳೆಯೇ ಈ ಬಗ್ಗೆ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ’ ಎಂದರು.
ಸಮಸ್ಯೆ ಪರಿಹಾರಕ್ಕೆ ಸಮಿತಿ ಏಕೆ ರಚಿಸಬಾರದು ಎಂದೂ ನ್ಯಾಯಪೀಠವು ಸರಕಾರವನ್ನು ಪ್ರಶ್ನಿಸಿತು.