Advertisement

ಸಿಆರ್‌ಪಿಸಿ ನಿಯಮ ಬದಲು ವಿಚಾರಣೆಗೆ ಸುಪ್ರೀಂ ಒಪ್ಪಿಗೆ

09:46 AM Nov 29, 2019 | sudhir |

ನವದೆಹಲಿ: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿಧಿಸಲಾಗಿರುವ ಪ್ರತ್ಯೇಕ ಜೈಲು ಶಿಕ್ಷೆಗಳನ್ನು ಒಂದರ ನಂತರ ಒಂದರಂತೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು. ಆ ಎಲ್ಲಾ ಶಿಕ್ಷೆಗಳನ್ನೂ ಏಕಕಾಲಕ್ಕೇ ಅನುಭವಿಸುವ ಅವಕಾಶ ಬೇಡ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.
ಬಿಜೆಪಿ ನಾಯಕ ಅಶ್ವಿ‌ನಿ ಉಪಾಧ್ಯಾಯ್‌ ಎಂಬವರು ಈ ಅರ್ಜಿ ಸಲ್ಲಿಸಿದ್ದರು.

Advertisement

ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ (ಸಿಆರ್‌ಪಿಸಿ) ಪ್ರಕಾರ, ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯು ಏಕಕಾಲದಲ್ಲಿ ಎಲ್ಲಾ ಶಿಕ್ಷೆಗಳನ್ನು ಅನುಭವಿಸಲು ಅವಕಾಶವಿದೆ. ಆದರೆ, ಈ ಅವಕಾಶವನ್ನು ನೀಚ ಕೃತ್ಯಗಳ ಅಪರಾಧಿಗಳಿಗೆ ನೀಡುವುದು ಬೇಡ ಎಂಬುದು ಅರ್ಜಿದಾರರ ನಿಲುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next