Advertisement

Supreme Court ಸಲಹೆ; ಹೊಂದಾಣಿಕೆಯು ಸುಖ ದಾಂಪತ್ಯದ ಅಡಿಪಾಯ

01:59 AM May 04, 2024 | Team Udayavani |

ಹೊಸದಿಲ್ಲಿ: ಸಹಿಷ್ಣುತೆ, ಹೊಂದಾಣಿಕೆ ಮತ್ತು ದಂಪತಿ ಒಬ್ಬರ ಬಗ್ಗೆ ಮತ್ತೂಬ್ಬರು ಪರಸ್ಪರ ಹೊಂದಿರುವ ಗೌರವವೇ ಸುಖ ದಾಂಪತ್ಯದ ಅಡಿಪಾಯ. ಸಣ್ಣಪುಟ್ಟ ಜಗಳ ಮತ್ತು ಕ್ಷುಲ್ಲಕ ಭಿನ್ನಾಭಿಪ್ರಾಯಗಳನ್ನು ಉತ್ಪ್ರೇಕ್ಷೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸಲಹೆ ನೀಡಿದೆ.

Advertisement

ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ| ಮನೋಜ್‌ ಮಿಶ್ರಾ ಅವರ ನ್ಯಾಯಪೀಠವು ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ ತಮ್ಮ ಪತಿಯ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಪ್ರತಿ ದಾಂಪತ್ಯದಲ್ಲಿಯೂ ಸಣ್ಣ ಪುಟ್ಟ ಜಗಳಗಳನ್ನು ಮನ್ನಿಸುವ ಒಬ್ಬರನ್ನೊಬ್ಬರು ಗೌರವಿಸುವ ಗುಣಗಳು ಅಂಗತರ್ಗವಾಗಿರಬೇಕು. ಕ್ಷುಲ್ಲಕ ಭಿನ್ನಾಭಿಪ್ರಾಯ ಗಳು, ಜಗಳಗಳು ಸಾಮಾನ್ಯ. ಅವುಗಳನ್ನು ದೊಡ್ಡದು ಮಾಡಿದರೆ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎಂದು ನಂಬುವಂಥ ಮದುವೆಗಳನ್ನು ಹಾಳುಮಾಡಿದಂತಾ ಗುತ್ತದೆ’ ಎಂದಿದೆ. ಜತೆಗೆ ಬಹಳಷ್ಟು ಬಾರಿ ವಿವಾಹಿತ ಮಹಿಳೆಯ ಪೋಷಕರು ಮತ್ತು ಹತ್ತಿರದ ಸಂಬಂಧಿಗಳೇ ದಂಪತಿ ನಡುವೆ ಇರುವ ಕಡ್ಡಿಯನ್ನು ಗುಡ್ಡ ಮಾಡುತ್ತಾರೆ ಇದು ಸರಿಯಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next