Advertisement

ಸುಪ್ರೀಂಗೆ ಮೇಲ್ಮನವಿ

06:00 AM May 03, 2018 | Team Udayavani |

ಇಸ್ಲಾಮಾಬಾದ್‌: ಸಂಸತ್‌ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಪಾಕಿಸ್ತಾನದ ಮಾಜಿ ಸಚಿವ ಖವಾಜಾ ಆಸಿಫ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಿದೇಶಿ ಕೆಲಸದ ವಿಚಾರವನ್ನು ಮರೆ ಮಾಚುವ ಯಾವ ಉದ್ದೇಶವೂ ಇರಲಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಯುಎಇನಲ್ಲಿ ಹೊಂದಿದ್ದ ಕೆಲಸದ ಪರವಾನಗಿ ವಿಚಾರ ಮರೆ ಮಾಚಿದ್ದಕ್ಕಾಗಿ ಇಸ್ಲಾಮಾಬಾದ್‌ ಹೈಕೋರ್ಟ್‌ ವಿದೇಶಾಂಗ ಸಚಿವರಾಗಿದ್ದ ಆಸಿಫ್ರನ್ನು ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next