Advertisement

EVM ವ್ಯವಸ್ಥೆಯನ್ನು ಕುಂದಿಸಬೇಡಿ: ಸುಪ್ರೀಂ ಕೋರ್ಟ್‌

09:19 AM Apr 17, 2024 | Team Udayavani |

ಹೊಸದಿಲ್ಲಿ: ವಿದ್ಯುನ್ಮಾನ ಮತದಾನ ವ್ಯವಸ್ಥೆ (ಇವಿಎಂ)ಯನ್ನು ಕುಂದಿಸುವ ಪ್ರಯತ್ನ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಇವಿಎಂ ಮತಗಳ ಜತೆಗೆ ಶೇ.100ರಷ್ಟು ವಿವಿಪ್ಯಾಟ್‌(ವೋಟರ್‌ ವೆರಿಫೈಬಲ್‌ ಪೇಪರ್‌ ಆಡಿಟ್‌)ಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾ| ಸಂಜೀವ್‌ ಖನ್ನಾ ಮತ್ತು ನ್ಯಾ| ದೀಪಂಕರ್‌ ದತ್ತಾ ಅವರಿದ್ದ ಪೀಠವು, ಇವಿಎಂ ವ್ಯವಸ್ಥೆಯ ಅಸಲಿಯತ್ತು ಕುರಿತು ಪ್ರಶ್ನಿಸಲಾಗು ತ್ತಿರುವ ವಾದಗಳನ್ನೇ ಪ್ರಶ್ನಿಸಿತು. ಇವಿಎಂಗಳನ್ನು ಜನರು ನಂಬುತ್ತಿಲ್ಲ ಎಂಬ ಖಾಸಗಿ ಅಂಕಿ ಸಂಖ್ಯೆಗಳನ್ನು ನಂಬಬೇಕಿಲ್ಲ ಎಂದು ಹೇಳಿತು.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಪ್ರಶಾಂತ್‌ ಭೂಷಣ್‌ “ಸ್ಟಡಿ ಆಫ್ ಡೆವಲ್‌ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ಮುಂದಿಟ್ಟರು. ಇವಿಎಂಗೆ ಪರ್ಯಾಯವಾಗಿ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆಗೆ ಮರಳು ವುದು ಸೂಕ್ತ ಎಂಬ ವಾದಕ್ಕೆ ಪ್ರತಿಕ್ರಿಯಿ ಸಿದ ಪೀಠವು, ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಇದ್ದಾಗ ಏನೆಲ್ಲ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಎ.18ಕ್ಕೆ ನಿಗದಿಪಡಿಸಿತು.

ಇದನ್ನೂ ಓದಿ: Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next