Advertisement

Supreme Court; ನಿಷ್ಠರಾಗಿದ್ದ ಮಾತ್ರಕ್ಕೆ ಕಾನೂನು ಮೀರುವಂತಿಲ್ಲ !

10:03 PM Apr 18, 2023 | Team Udayavani |

ನವದೆಹಲಿ: ಸಾರ್ವಜನಿಕ ಹಣಕಾಸು ವಿಚಾರದಲ್ಲಿ ನಿಷ್ಠರಾಗಿದ್ದೇವೆ ಎಂದ ಮಾತ್ರಕ್ಕೆ, ಕಾನೂನು ಕಟ್ಟಳೆಗಳನ್ನು ಮೀರಬಹುದು ಎಂದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಮಹಾರಾಷ್ಟ್ರದ ಧುಲೆ ಜಿಲ್ಲಾ ಪರಿಷತ್‌ನ ಸದಸ್ಯರೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಈ ಅಭಿಪ್ರಾಯ ನೀಡಿದೆ. ಜತೆಗೆ ಮೇಲ್ಮನವಿಯನ್ನೂ ತಿರಸ್ಕರಿಸಿದೆ.

ಜಿಲ್ಲಾ ಪರಿಷತ್‌ ಸದಸ್ಯ ವಿರೇಂದ್ರ ಸಿಂಗ್‌ ಎಂಬುವರು 15 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಯೊಂದಕ್ಕೆ ಅನುಮೋದನೆ ನೀಡಿದ್ದರು. ಅದಕ್ಕೆ ಗುತ್ತಿಗೆದಾರನನ್ನಾಗಿ ತಮ್ಮ ಪುತ್ರನ ಹೆಸರನ್ನೇ ನೋಂದಾಯಿಸಿದ್ದರು.

ಕುಟುಂಬ ಸದಸ್ಯರಿಗೇ ಗುತ್ತಿಗೆ ನೀಡಿದ್ದನ್ನು ವಿರೋಧಿಸಿ ನಾಶಿಕ್‌ನ ವಿಭಾಗೀಯ ಆಯುಕ್ತರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಆಯುಕ್ತರು ವಿರೇಂದ್ರ ಸಿಂಗ್‌ರನ್ನು ಸದಸ್ಯತ್ವದಿಂದ ಅನರ್ಹತೆಗೊಳಿಸಿದ್ದರು. ಅದನ್ನು ಪ್ರಶ್ನಿಸಿ ದಾವೆ ಹೂಡಲಾಗಿತ್ತು.

“ಚುನಾಯಿತ ಸದಸ್ಯರನ್ನು ಕ್ಷುಲ್ಲಕ ಕಾರಣಕ್ಕೆ ವಜಾ ಮಾಡುವುದು ಸಲ್ಲ. ಸ್ಥಳೀಯ ಕಾಮಗಾರಿಗಳ ಗುತ್ತಿಗೆ ನೀಡುವ ಸಂದರ್ಭದಲ್ಲಿ ಚುನಾಯಿತ ಸದಸ್ಯರು ಅನಗತ್ಯವಾಗಿ ಒತ್ತಡ ಹೇರುತ್ತಾರೆ. ಹಣಕಾಸು ವಿಚಾರಗಳಲ್ಲಿ ನಿಷ್ಠರಾಗಿದ್ದೇವೆ ಎಂಬದರೆ ಸಾಲದು.

Advertisement

ಕೆಲವೊಂದು ಸಂದರ್ಭಗಳಲ್ಲಿ ಪಾರದರ್ಶಕತೆಯನ್ನೇ ಸೋಲಿಸುವ ವ್ಯವಸ್ಥೆ ಇರುವಾಗ ಕಠಿಣವಾಗಿ ನಿಯಮಗಳ ಪಾಲನೆ ಮಾಡಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next