Advertisement

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

12:53 AM Jul 09, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಬೇಸಗೆ ರಜೆ ಅವಧಿಯಲ್ಲಿ ಈ ವರ್ಷ ಬರೋಬ್ಬರಿ 1,170 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಈ ವರ್ಷ ರಜೆಕಾಲದ ಪೀಠಗಳಿಗಾಗಿ 4,160 ಪ್ರಕರಣಗಳನ್ನು ನಿಯೋಜನೆ ಮಾಡಲಾಗಿತ್ತು.
ರಜೆಗೆ ಸಂಬಂಧಿಸಿ ಹಲವು ವಿರೋಧಗಳ ನಡುವೆಯೂ ಈ ವರ್ಷ ರಜೆ ಮುಗಿಸಿ ಸೋಮ ವಾರ ಸುಪ್ರೀಂ ಕೋರ್ಟ್‌ ಕಲಾಪವನ್ನು ಆರಂಭಿಸಿದೆ. 2 ತಿಂಗಳ ಬೇಸಗೆ ರಜೆ ಅವಧಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಈ ಬಾರಿ 20 ಪೀಠಗಳನ್ನು ರಚನೆ ಮಾಡಲಾಗಿತ್ತು. ಕಳೆದ ವರ್ಷ ರಜೆಕಾಲದ ಪೀಠಗಳಿಗೆ 2,223 ಪ್ರಕರಣಗಳನ್ನು ನಿಯೋಜನೆ ಮಾಡಲಾಗಿತ್ತು. ಇದರಲ್ಲಿ 751 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಕೇಸುಗಳ ಇತ್ಯರ್ಥ 3 ಪಟ್ಟು ಹೆಚ್ಚಳವಾಗಿದೆ.

Advertisement

ಚಂದ್ರಚೂಡ್‌ ಬೇಸರ: ಸುಪ್ರೀಂ ಕೋರ್ಟ್‌ ನಲ್ಲಿರುವ ನ್ಯಾಯಮೂರ್ತಿಗಳು ಬೆಳಗ್ಗೆ 10.30ರಿಂದ ಸಂಜೆ 4ರ ವರೆಗೆ ಕೆಲಸ ಮಾಡುತ್ತಾರೆ ಎಂದು ಜನ ಭಾವಿಸುತ್ತಾರೆ. ಆದರೆ ಈ ಅವಧಿಯಲ್ಲಿ ನಾವು 40ರಿಂದ 60 ಪ್ರಕರಣಗಳನ್ನು ಆಲಿಸುತ್ತೇವೆ. ಕಲಾಪ ಇಲ್ಲದ ಸಮಯದಲ್ಲಿ ಮುಂದಿನ ಕೇಸಿನ ವಿಚಾರಣೆಯ ಬಗ್ಗೆ, ವಿಚಾರಣೆ ಮುಗಿದ ಪ್ರಕರಣಗಳ ತೀರ್ಪಿನ ಬಗ್ಗೆ ಚಿಂತನೆ ನಡೆಸುತ್ತೇವೆ. ಹೀಗಾಗಿ ನ್ಯಾಯಮೂರ್ತಿಗಳು ವಾರದ 7 ದಿನವೂ ಕೆಲಸ ಮಾಡಿದಂತಾಗುತ್ತದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next