Advertisement
ಪ್ರಜಾಪ್ರಭುತ್ವವ ರಕ್ಷಿಸಿದ ಕೇಶವಾನಂದ ಭಾರತಿ ಪ್ರಕರಣಅದು 1970ರ ಫೆಬ್ರವರಿ ತಿಂಗಳು. ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿಯಿರುವ “ಎಡನೀರು ಮಠ’ಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿ, ಈ ಕುರಿತು ನೋಟಿಸ್ ಜಾರಿ ಮಾಡಿತು. ಆದರೆ ಸರ್ಕಾರದ ಈ ನಡೆಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿಯವರು ವಿರೋಧ ವ್ಯಕ್ತಪಡಿಸಿದರು.
Related Articles
Advertisement
ಎ.ಎನ್.ರೇಗೆ ಇಂದಿರಾ ಕಟಾಕ್ಷ!ಈ ತೀರ್ಪಿನ ನಂತರ ಆಘಾತಕಾರಿ ಬೆಳವಣಿಗೆಯೊಂದೂ ನಡೆಯಿತು. ಇಂದಿರಾ ಸರ್ಕಾರ, ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎನ್.ಶೀಲತ್ ಮತ್ತು ಎ.ಎನ್. ಗ್ರೋವರ್ ಎಂಬ ಮೂವರ ಹಿರಿತನವನ್ನು ಬದಿ ಗಿರಿಸಿ ನ್ಯಾಯಮೂರ್ತಿ ಎ.ಎನ್.ರೇ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿತು. (ಎ.ಎನ್.ರೇ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು!) ಪ್ರಕರಣದಲ್ಲಿ ಜ. ಕೆ.ಎಸ್. ಹೆಗ್ಡೆ, ಜ. ಜೆ.ಎನ್.ಶೀಲತ್ ಮತ್ತು ಜ. ಎ.ಎನ್. ಗ್ರೋವರ್ ಬಹುಮತದ ಪರವಾಗಿ ಇದ್ದದ್ದು ಇಂದಿರಾ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು. ಎ.ಎನ್. ರೇ. ಅವರನ್ನು ಸಿಜೆಐ ಆಗಿ ನೇಮಿಸಿದ್ದನ್ನು
ಭಾರತೀಯ ಕಾನೂನು ಇತಿಹಾಸದಲ್ಲೇ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ.
ಈಗಲೂ ದೇಶಾದ್ಯಂತ ಪರ-ವಿರೋಧದ ತಕ್ಕಡಿಯಲ್ಲಿ ತುಯ್ದಾಡುತ್ತಿದೆ “ಆಧಾರ್’. ಆಧಾರ್ ಸಿಂಧುತ್ವ, ಕಡ್ಡಾಯ ಕುರಿತಂತೆ ಕಳೆದ ವರ್ಷ ಸುಪ್ರೀಂ ಕೋರ್ಟಿನಲ್ಲಿ ನಾಲ್ಕು ತಿಂಗಳಲ್ಲಿ, 38 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ನಡೆಸಿದ ಈ ವಿಚಾರಣೆಯು ಆ ಸಮಯದಲ್ಲಿ ಕೇಶವಾನಂದ ಭಾರತಿ ಪ್ರಕರಣದ ನಂತರ ಎರಡನೇ ಸುದೀರ್ಘ ವಿಚಾರಣೆ ಎಂದು ಕರೆಸಿಕೊಂಡಿತ್ತು. ಈ ಪಂಚಸದಸ್ಯ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಕೆ. ಸಿಕ್ರಿ, ಜ. ಅಶೋಕ್ ಭೂಷಣ್, ಜ. ಎ.ಎಂ. ಖಾನ್ವಿಲ್ಕರ್ ಮತ್ತು
ಜ. ಡಿ.ವೈ. ಚಂದ್ರಚೂಡ್ ಇದ್ದರು. ಆಧಾರ್ ಕಾರ್ಡ್ ಕಡ್ಡಾಯ ಪ್ರಶ್ನಿಸಿ 30ಕ್ಕೂ ಹೆಚ್ಚು ಅರ್ಜಿದಾರರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ನಡೆದಿದೆ, ಇದು ಖಾಸಗಿತನಕ್ಕೆ ಧಕ್ಕೆ ಮಾಡುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ ಕೇಂದ್ರ ಸರ್ಕಾರ ಆಧಾರ್ ಅನ್ನು ಸಮರ್ಥಿಸಿಕೊಂಡಿತ್ತು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಒಂದು ಸಮತೋಲನ ಮುಖ್ಯ ಎನ್ನುವುದನ್ನು ಸಾರಿ ಹೇಳಿತು. ಬ್ಯಾಂಕ್ ಅಕೌಂಟ್, ಫೋನ್ ನಂಬರ್ ಅಥವಾ ಶಾಲೆಗೆ ಸೇರಿಸಲು ಆಧಾರ್ ಕಡ್ಡಾಯವಲ್ಲ
ಎಂದು ಕೋರ್ಟ್ ಹೇಳಿತು. ಜತೆಗೇ, ಆಧಾರ್‌ನ ಮಾನ್ಯತೆಯನ್ನೂ ಎತ್ತಿಹಿಡಿಯಿತು. ರಾಮ ಜನ್ಮಭೂಮಿಗಾಗಿ…
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ವಿವಾದದ ಅಂತಿಮ ವಿಚಾರಣೆ ಆಗಸ್ಟ್ 6ರಿಂದ ಆರಂಭವಾಗಿ ಅಕ್ಟೋಬರ್ 16ರಂದು ಮುಕ್ತಾಯಗೊಂಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ನವೆಂಬರ್ 17ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರಕರಣದ ಅಂತಿಮ ತೀರ್ಪನ್ನು ನಿವೃತ್ತಿಯಾಗುವ ಮೊದಲೇ ಘೋಷಿಸುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ಅಧಿಕೃತ ವಿದೇಶ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ಬೋರ್ಡ್, ನಿರ್ಮೋಹಿ, ಅಖಾಡ ಹಾಗೂ ರಾಮಲಲ್ಲಾ ಸಮಾನವಾಗಿ ವಿಭಜಿಸಿ ನೀಡಬೇಕು ಎಂದು 2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆ ಇದಾಗಿತ್ತು. ಟೈಮ್‌ಲೈನ್
1950: ಶ್ರೀರಾಮನ ಪೂಜೆಗೆ ಅವಕಾಶ ಕಲ್ಪಿಸುವಂತೆ ಗೋಪಾಲ್ ಸಿಂಗ್, ರಾಮಚಂದ್ರದಾಸ್ ಸೇರಿದಂತೆ ನಾಲ್ಕು ಪ್ರತ್ಯೇಕ ಅರ್ಜಿ.
1961: ಬಾಬ್ರಿ ಮಸೀದಿ ತನ್ನ ಸ್ವತ್ತು ಎಂದು ಕೋರ್ಟ್ ಮೆಟ್ಟಿಲೇರಿದ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ.
1986: ಮಸೀದಿ ಬಾಗಿಲು ತೆರೆವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಿಂದ ತೀರ್ಪು. ಅದೇ ವರ್ಷ, ಬಾಬ್ರಿ ಮಸೀದಿ ಆ್ಯಕ್ಷನ್ ಕಮಿಟಿ ಅಸ್ತಿತ್ವಕ್ಕೆ.
1989: ಬಾಬ್ರಿ ಮಸೀದಿ-ರಾಮಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳೂ ಹೈಕೋರ್ಟ್‌ಗೆ
1992: ಬಾಬ್ರಿ ಮಸೀದಿ ಧ್ವಂಸ. ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ.
ಡಿ.1992: ತನಿಖೆ ನಡೆಸಲು ಲಿಬರ್ಹಾನ್ ಸಮಿತಿ ಸ್ಥಾಪಿಸಿದ ಕಾಂಗ್ರೆಸ್ ಸರ್ಕಾರ
1993: ಎಲ್ ಕೆ ಆಡ್ವಾಣಿ ಹಾಗೂ ಇತರೆ 13 ನಾಯಕರ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ. ಸಿಬಿಐನಿಂದ ಚಾರ್ಜ್‌ಶೀಟ್.
2003: ವಿವಾದಿತ ಪ್ರದೇಶವು ನಿಜಕ್ಕೂ ಶ್ರೀರಾಮನ ಜನ್ಮಸ್ಥಳವೇ ಎನ್ನುವುದನ್ನು ಪರಿಶೀಲಿಸಲು ಭೂಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಆರಂಭ. ಇದು ರಾಮಜನ್ಮಸ್ಥಾನ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಹೇಳಿದ ತಂಡ. ಇದನ್ನು ನಿರಾಕರಿಸಿದ ವಕ್ಫ್.
2010: ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ಬೋರ್ಡ್, ನಿರ್ಮೋಹಿ, ಅಖಾಡ ಹಾಗೂ ರಾಮಲಲ್ಲಾಗೆ ಸಮಾನವಾಗಿ ವಿಭಜಿಸಿ ನೀಡಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ತೀರ್ಪು.
2011-2017: ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಹಿಂದೂ ಹಾಗೂ ಮುಸ್ಲಿಂ ದೂರುದಾರರು.
ಡಿಸೆಂಬರ್ 05, 2017: ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ. ಸುನ್ನಿ ಬೋರ್ಡ್‌ನಿಂದ ಕಾಲಾವಕಾಶ ಕೋರಿಕೆ, ವಿಚಾರಣೆ ಮುಂದೂಡಿಕೆ.
ಆ.6-ಅ.16, 2019: ರಾಮಜನ್ಮ ಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿರಂತರ ವಿಚಾರಣೆ