Advertisement

ಯುವ ನಾಯಕತ್ವ ಬೆಂಬಲಿಸಿ:ಪ್ರವೀಣ್ ‌ಪೀಟರ್‌

12:56 PM Oct 22, 2020 | Suhan S |

ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಳೆದ 3 ಬಾರಿ ಚುನಾಯಿತರಾಗಿರುವ ವ್ಯಕ್ತಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪೀಟರ್‌ ಹೇಳಿದರು.

Advertisement

ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಶಿಕ್ಷಕರ ಪರ ಗಟ್ಟಿ ದನಿಯಾಗಿ, ಪ್ರಜ್ಞಾಪೂರ್ವಕವಾಗಿ ಸರ್ಕಾರವನ್ನು ಎಚ್ಚರಿಸುವ ಅಗತ್ಯವಿದ್ದು, ಯುವ ನಾಯಕತ್ವ ಮತ್ತು ಪ್ರಗತಿಪರ ಚಿಂತನೆಗಳನ್ನು ಶಿಕ್ಷಕ ಸಮುದಾಯ ಬೆಂಬಲಿಸ ಬೇಕಿದೆ ಎಂದರು. ಸುಶಿಕ್ಷಿತ ಮತದಾರರು ಬದಲಾವಣೆಯ ಪರ ಇದ್ದಾರೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರ ಸಮಸ್ಯೆಗಳು ವಿಭಿನ್ನವಾಗಿದ್ದು, ಅವುಗಳಿಗೆ ತಾರ್ಕಿಕವಾದ ಪರಿಹಾರ ಕಂಡುಕೊಳ್ಳಕಿದೆ ಎಂದರು.

ಶಿಕ್ಷಕರು ಗಮನಿಸಲಿ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಆದರೆ ಹಿಂದಿನ ವಿಧಾನ ಪರಿಷತ್‌ ಸದಸ್ಯರಾಗಿದ್ದವರು ಶಿಕ್ಷಣ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಇದನ್ನು ಶಿಕ್ಷಕ ಮತದಾರರು ಗಮನಿಸಬೇಕು ಎಂದರು.

ಅನುದಾನದಲ್ಲಿ ವಂಚನೆ: ದೊಡ್ಡಬಳ್ಳಾಪುರದಲ್ಲಿಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಯಾವುದೇ ಅನುದಾನ ಕೊಡದೆ ವಂಚಿಸಲಾಗುತ್ತಿದೆ. ಕಳೆದ ಸರ್ಕಾರದಲ್ಲಿ ಕ್ಷೇತ್ರಕ್ಕೆಮಂಜೂರಾಗಿದ್ದ ಸುಮಾರು 140 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ವಿಪಕ್ಷದವರ ತಡೆಯಿಂದಾಗಿ ನಗರಕ್ಕೆ ಮಂಜೂರಾಗಿದ್ದ 25ಕೋಟಿ ರೂ. ವಾಪಾಸು ಹೋಗಿದೆ ಎಂದರು.

ಮರೆಮಾಚಿದ ಕೊವಿಡ್‌-19 ವರದಿ: ತಾಲೂಕಿನಲ್ಲಿಕೊವಿಡ್‌-19 ಬುಲೆಟಿನ್‌ ಬಿಡುಗಡೆ ಮಾಡುತ್ತಿದ್ದರೂ, ಅದರಲ್ಲಿ ಮೃತಪಟ್ಟವರ ಸಂಖ್ಯೆ ನೀಡದೇ ಮರೆಮಾಚಲಾಗುತ್ತಿದೆ. ನಿಖರ ವರದಿ ನೀಡಿದರೆ, ಮಾತ್ರ ಜನರಿಗೆ ವಾಸ್ತವ ಸ್ಥಿತಿ ತಿಳಿಯುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಬೈರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಚ್‌.ಎಸ್‌. ರೇವತಿ, ಎಪಿಎಂಸಿ ನಿರ್ದೇಶಕ ಸೋಮರುದ್ರ ಶರ್ಮ,ಎಸ್ಸಿ ಘಟಕ ಅಧ್ಯಕ್ಷ ಮುನಿರಾಜು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಷೀರ್‌, ಮುಖಂಡರಾದ ಬಿ.ಜಿ. ಹೇಮಮಂತ ರಾಜು,ಕುಮುದಾ ಹಾಜರಿದ್ದರು.

Advertisement

ಹಾಲಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರತಿನಿಧಿ ಕಳೆದ 3 ಬಾರಿ ಒಂದು ಪಕ್ಷದಿಂದ ಗೆದ್ದು, ಈಗ ಪûಾಂತರ ಮಾಡಿ ಮತ್ತೂಂದು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಶಿಕ್ಷಕರು ಆಲೋಚಿಸಿ ಮತ ನೀಡಬೇಕು. ಜಿ.ಲಕ್ಷ್ಮೀಪತಿ, ಕೆಪಿಸಿಸಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next