ಜಗಳೂರು: ಕಳೆದ 5 ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಹೆಚ್ಚಿನ ಅಭಿವೃದ್ಧಿಗೆ ಈ ಬಾರಿಯೂ ಬಿಜೆಪಿ ಬೆಂಬಲಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು .
ಶನಿವಾರ ತಾಲೂಕಿನ ಹಿರೇಮಲ್ಲನಹೋಳೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದೇಶ ಸುಭದ್ರವಾಗಿರಬೇಕಾದರೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಪುಲ್ವಾಮ ದಾಳಿ ನಂತರ ಪಾಕ್ ಭಯೋತ್ಪಾದಕರ ಶಿಬಿರಗಳ ಮೇಲೆ ಪ್ರತಿ ದಾಳಿ ಮಾಡಿದಧೀರ ಪ್ರಧಾನ ಮಂತ್ರಿ ಮೋದಿಯಾಗಿದ್ದಾರೆ ಎಂದರು.
ಕೇಂದ್ರದಿಂದ ಪಡಿತರ ಅಕ್ಕಿ ಮತ್ತು ಗೋಧಿಗೆ ಸಹಾಯಧನ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ ಸಹಾಯಧನ, ರೈತ
ಆತ್ಮಹತ್ಯೆ ಮಾಡಿಕೊಂಡಾಗ 4 ಲಕ್ಷ ರೂ. ಪರಿಹಾರಧನ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುದಾನ ಬರುತ್ತದೆ. ನರೇಗಾ ಯೋಜನೆಗೆ 652 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.
ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆ, ಸುಕನ್ಯ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಸ್ವತ್ಛ ಭಾತರ್
ಯೋಜನೆ, ಉಜ್ವಲ ಯೋಜನೆ ಮೊದಲಾದ ನೂರಾರು ಯೋಜನೆ ಜಾರಿಗೆ ತಂದು ಮೋದಿ ದೇಶದ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು ಈ ವೇಳೆ ಗ್ರಾಮಸ್ಥರು ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದಾಗ ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಚುನಾವಣೆಯ ನಂತರ ಮಾಡೊಣ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ. ಪ್ರಧಾನ ಕಾರ್ಯದರ್ಶಿ ಜೆ.ವಿ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸವಿತಾ, ಶಾಂತಕುಮಾರಿ, ಎಸ್.ಕೆ. ಮಂಜುನಾಥ್, ತಾಪಂ ಸದಸ್ಯ ತಿಮ್ಮಬೋವಿ ಸಿದ್ದೇಶ್, ಮುಖಂಡರಾದ ಸೊಕ್ಕೆ ನಾಗರಾಜ್, ಪಲ್ಲಾಗಟ್ಟೆ ಮಹೇಶ್, ಅರವಿಂದ್ , ಡಾ| ಮಂಜುನಾಥ್, ಬಿಸ್ತುವಳ್ಳಿ ಬಾಬು, ತೋರಣಗಟ್ಟ ಬಾಲಣ್ಣ, ಇತರರು ಇದ್ದರು.