Advertisement
ಈ ಚುನಾವಣೆಯನ್ನು ಯಾವ ವಿಷಯ ದೊಂದಿಗೆ ಕಣಕ್ಕೆ ಇಳಿದಿದ್ದೀರಿ?ಇದು ನಂಬಿಕೆ ಮತ್ತು ಮೋಸದ ನಡುವಿನ ಯುದ್ಧವಾಗಲಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಂಧ್ರಕ್ಕೆ ಮೋಸ ಮಾಡಿದ್ದಾರೆ. 2014ರಲ್ಲಿ ಅವರು ವಾಗ್ಧಾನ ಮಾಡಿದ್ದಕ್ಕೂ, ಅನುಷ್ಠಾನಕ್ಕೂ ಹೋಲಿಕೆಯೇ ಇಲ್ಲ. ಕೆಲ ಸಮಯ ಎನ್‌ಡಿಎ ಜತೆಗಿದ್ದೂ ಏನು ಲಾಭವಾಗಲಿಲ್ಲ.
ಹಿಂದಿನ ಚುನಾವಣೆಯಲ್ಲಿ ಸೋಲು ಮತ್ತು ಗೆಲುವಿನ ಅಂತರ ಕೇವಲ ಶೇ.1 ಆಗಿತ್ತು. ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಹಿಂದಿನ ಬಾರಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಪ್ರತಿಪಕ್ಷದಲ್ಲಿದ್ದುದರಿಂದ ಸುಳ್ಳು ಹೇಳಿ ಗೆದ್ದರು. ಸ್ವಲ್ಪ ಮೋದಿ ಅಲೆ, ಪವನ್ ಕಲ್ಯಾಣ್ ಪ್ರಭಾವ ಅವರಿಗೆ ನೆರವಾಯಿತು. ವಿಶೇಷ ಸ್ಥಾನ ಮಾನ ಕೊಟ್ಟವರಿಗೆ ಕೇಂದ್ರದಲ್ಲಿ ಬೆಂಬಲ ಎಂದಿದ್ದೀರಿ?
ಕಾಂಗ್ರೆಸ್, ಬಿಜೆಪಿ ಬಗ್ಗೆ ನಮಗೆ ನಂಬಿಕೆ ಇಲ್ಲ. ರಾಜ್ಯ ವಿಭಜನೆ ವೇಳೆ ಕಾಂಗ್ರೆಸ್ ಸಂಸತ್‌ನಲ್ಲಿ ವಿಶೇಷ ಸ್ಥಾನಮಾನದ ಭರವಸೆ ನೀಡಿತ್ತು. ಬಿಜೆಪಿ ಅದನ್ನು ಬೆಂಬಲಿಸಿದ್ದು ಮಾತ್ರವಲ್ಲದೆ, ಹತ್ತು ವರ್ಷಗಳ ಅವಧಿಯ ಸ್ಥಾನಮಾನದ ವಾಗ್ಧಾನ ಮಾಡಿತ್ತು. 2 ಪಕ್ಷಗಳು ತಮ್ಮ ಮಾತುಗಳನ್ನು ನಡೆಸಲಿಲ್ಲ. ಕೆಸಿಆರ್ ಕೂಡ ನಮಗೆ ಬೆಂಬಲ ನೀಡಲಿದ್ದಾರೆ. ಆಂಧ್ರದಲ್ಲಿ 25, ತೆಲಂಗಾಣದಲ್ಲಿ 17; ಹೀಗೆ ನಮ್ಮಲ್ಲಿ ಉತ್ತಮ ಫಲಿತಾಂಶ ಅನುಕೂಲವಾಗಲಿದೆ.
Related Articles
ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡಲು ಸಾಧ್ಯವಿದೆಯೋ ಅದಕ್ಕೆ ಬೇಕಾದ ಪ್ರಯತ್ನ ನಡೆಸಿದ್ದಾರೆ. ನಾಯಕತ್ವ ಹೇಗೆ ಇರಬೇಕು ಎನ್ನುವುದನ್ನು ಅವರು ಸಮರ್ಥವಾಗಿಯೇ ಪ್ರದರ್ಶಿಸಿದ್ದಾರೆ. ದೇಶದ ಇತರ ಭಾಗದಲ್ಲಿ ಅವರಿಗೆ ಅದು ಧನಾತ್ಮಕವಾಗಿ ಪ್ರಯೋಜನವಾಗಬಹುದು. ಆದರೆ ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಯಾವುದೇ ರಾಷ್ಟ್ರೀಯ ಪಕ್ಷಗಳು ಉತ್ತಮ ಸಾಧನೆ ಮಾಡಲಾರವು.
Advertisement
ನೀವು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಜತೆಗೆ ಕೈ ಜೋಡಿಸಿದ್ದೀರಿ ಎನ್ನುವುದು ಚಂದ್ರಬಾಬು ನಾಯ್ಡು ಆರೋಪಿಸುತ್ತಾರೆ.ತೆಲಂಗಾಣ ಸಿಎಂ, ನಮ್ಮ ಪಕ್ಷದ ಜತೆಗೆ ಚುನಾವಣಾ ಮೈತ್ರಿ ಇಲ್ಲ. ಆದರೆ ಒಬ್ಬರನ್ನೊಬ್ಬರು ಬೆಂಬಲಿಸುತ್ತಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವಂತೆ ಅತ್ಯಂತ ಬಡತನದಲ್ಲಿರುವ ಕುಟುಂಬಗಳಿಗೆ ಕನಿಷ್ಠ ಆದಾಯ ಒದಗಿಸುವ ಯೋಜನೆ ಕಾರ್ಯ ಸಾಧ್ಯವಾದೀತೆ?
ರಾಹುಲ್ ಗಾಂಧಿಯವರ ಭರವಸೆಯೇ ಒಂದು ಅವಮಾನ. ಪ್ರತಿ ತಿಂಗಳು 12 ಸಾವಿರ ರೂ.ಗಳಿಗಿಂತ ಕಡಿಮೆ ಇರುವ ಎಲ್ಲರಿಗೆ ಯೋಜನೆ ಅನ್ವಯ ಎಂದು ಹೇಳಿದ್ದಾರೆ. ಯೋಜನೆ ಏನೋ ಒಳ್ಳೆಯದೆ. ಆದರೆ ಅನುಷ್ಠಾನ ಹೇಗಾಗುತ್ತದೆ ಎನ್ನು ವುದು ಮುಖ್ಯ. ರಾಹುಲ್ ಪ್ರಕಾರ ಜನಸಂಖ್ಯೆಯ ಶೇ.20ರಷ್ಟು ಮಂದಿ ಬಡವರು ಅಥವಾ 5 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. ಅವರು ನೀಡಿದ ಸಾಂಖೀಕ ಮಾಹಿತಿ ತಪ್ಪಾಗಿರುವ ಸಾಧ್ಯತೆ ಇದೆ. (ಸಂದರ್ಶನ ಕೃಪೆ: ದ ಹಿಂದುಸ್ತಾನ್ ಟೈಮ್ಸ್)