ಸುರಪುರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಹಸನಾಪುರ ಮತ್ತು ಯಡಳ್ಳಿ ಗ್ರಾಮಗಳ ಕೆಲ ಯುವಕರು ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದೇವೆ. ನಾನು ಕೂಡ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಒದಗಿಸಿದ್ದೇನೆ. ಆದ್ದರಿಂದ ಇನ್ನಷ್ಟು ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಮತ್ತೂಮ್ಮೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಹಸನಾಪುರ: ಶರಣಪ್ಪ ಹಡಪದ, ಮಾರುತಿ ಸೂಗುರ, ಅಶೊಕ ಹಡಪದ, ಬಸವರಾಜ ಹಡಪದ, ಸಂಗಮೇಶ ಹಡಪದ, ರಾಘವೇಂದ್ರ ಸೂಗುರ, ಭೀಮಾಶಂಕರ ಬಿಲ್ಲವ್, ನಾಗರಾಜ ಬಿಲ್ಲವ್, ಪರಶುರಾಮ ಚಿನ್ನಾಕರ, ಶಶಿಕುಮಾರ, ಮಹೇಶ ರೆಡ್ಡಿ, ಮಹಾದೇಶ ಬಿಲ್ಲವ್ ಹಾಗೂ ಯಡಳ್ಳಿ ಗ್ರಾಮದ ಭೀಯಪ್ಪ ಕೊಂಚಿ, ಹಣಮಪ್ಪ ಕೊಂಚಿ, ಭೀಮಣ್ಣ ಕೊಂಚಿ, ನಿಂಗಪ್ಪ ಕೊಂಚಿ, ಜೋಗೆಪ್ಪ ಕೊಂಚಿ, ಮಲ್ಲಪ್ಪ ಕೊಂಚಿ, ಹಣಮಪ್ಪ ಕೊಂಚಿ, ಪರಶುರಾಮ ಕೊಂಚಿ, ಹಣಮಪ್ಪ ಟಣಕೇದಾರ, ದೇಸಾಯಿ ತಮ್ಮದೊಡ್ಡಿ, ಸೋಮಲಿಂಗಪ್ಪ ಹಳ್ಳಿಗೌಡ, ಪರಮಣ್ಣ ಹೊಸಗೌಡ, ಯಲ್ಲಪ್ಪ ಹಳ್ಳಿಗೌಡ, ಭೀಮಣ್ಣ ಗೊಳದಾರ ಇತರರು ಪಕ್ಷ ಸೇರ್ಪಡೆಗೊಂಡರು.
ಸರಕಾರದ ಯೋಜನೆ ಜನಕ್ಕೆ ತಿಳಿಸಿ ನಾರಾಯಣಪುರ: ನನ್ನ ಅಧಿಕಾರ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾಲೂಕಿನ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಸಮೀಪದ ಚಾಪಿ ತಾಂಡಾದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗ್ರಾಮದ ಹಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿಲಿವೆ ಎಂದ ಅವರು, ಮತ್ತೂಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ತಮ್ಮ ಬಂಧು ಸ್ನೇಹಿತರಿಗೆ ತಿಳಿ ಹೇಳುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಜಿಪಂ ಸದಸ್ಯ ರಾಜಶೇಖರಗೌಡ ವಜ್ಜಲ್, ಸೂಲಪ್ಪ ಕಮತಗಿ, ವೆಂಕೂಬ ಸಾಹುಕಾರ, ಅಮರಣ್ಣ ಕುಂಬಾರ, ಶಂಕರ ಚವ್ಹಾಣ, ಶಾಂತಪ್ಪ ಮೇಸ್ತಕ್, ನಾಗರಾಜ ಜೂಗುರ, ನಿಸಾರ್, ಬಸವರಾಜ ಜಾಧವ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಸೇರ್ಪಡೆಯಾದವರು: ಗೋಪಿ ಜಾಧವ, ಬಾಲಚಂದ್ರ ಜಾಧವ, ಸುರೇಶ ಜಾಧವ, ಜಂಪಣ್ಣ ಜಾಧವ, ಪ್ರಭು ಜಾಧವ, ದೇವರಾಜ ರಾಠೊಡ, ಸಂಗಪ್ಪ ಪೂಜಾರಿ, ಶಿವರಾಜ ಜಾಧವ, ಭೀಮಸಿಂಗ್ ಜಾಧವ, ಬಮಳಾಬಾಯಿ ಸೂರಪ್ಪ, ಗೋಬಿಬಾಯಿ ಜಾಧವ, ಭೀಮಾಬಾಯಿ ರಾಠೊಡ, ಅನುಸುಬಾಯಿ ರಾಠೊಡ, ಮೋತಿಬಾಯಿ ರಾಮಜಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.