Advertisement

ಕೋವಿಡ್‌ 19 ನಿಯಂತ್ರಣಕ್ಕೆ ಸಹಕರಿಸಿ

05:44 AM Jul 10, 2020 | Lakshmi GovindaRaj |

ಕೆ.ಆರ್‌.ನಗರ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್‌ 19 ಸೋಂಕಿಗೆ ಮೂವರು ಬಲಿಯಾಗಿ 10ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್‌ ಬಂದು ನೂರಾರು ಮಂದಿ ಕ್ವಾರಂಟೈನಿನಲ್ಲಿದ್ದರೂ ಸಾರ್ವಜನಿಕರು ಇದನ್ನು  ಗಂಭೀರವಾಗಿ ಪರಿಗಣಿಸುತ್ತಿಲ್ಲ.

Advertisement

ಜಿಲ್ಲೆಯಲ್ಲಿಯೇ ಕೆ.ಆರ್‌.ನಗರ ತಾಲೂಕಿನಲ್ಲಿ ಹೆಚ್ಚು ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿದ್ದರೂ ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ  ಮಾಸ್ಕ್ ಧರಿಸದೇ ರೋಗಕ್ಕೆ ಆಹ್ವಾನ ನೀಡುತ್ತಿದ್ದಾರೆ. ದೇಶಾದ್ಯಂತ ಕೋವಿಡ್‌ 19 ಆರ್ಭಟ ಮತ್ತು ಅದರಿಂದ ಉಂಟಾಗುತ್ತಿರುವ ಸಾವು-ನೋವುಗಳ ಬಗ್ಗೆ ಅರಿವಿದ್ದರೂ ಪಟ್ಟಣದ ಎಲ್ಲಾ ಕಡೆ ಜನಜಂಗುಳಿ ಕಡಿಮೆಯಾಗಿಲ್ಲ.

ಜತೆಗೆ ಸೀಲ್‌ಡೌನ್‌ ಆಗಿರುವ ಆಂಜನೇಯ ಬಡಾವಣೆಯ  ಶ್ರೀರಾಮಮಂದಿರ ರಸ್ತೆಯಲ್ಲಿ ನೆಪಮಾತ್ರಕ್ಕೆ ಸೀಲ್‌ಡೌನ್‌ ಮಾಡಿದ್ದು, ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲದಂತಾಗಿದೆ. ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂದೆ ಹಾಸನ-ಮೈಸೂರು  ರಸ್ತೆಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ, ಬ್ಯಾಂಕುಗಳು ಸೇರಿದಂತೆ ಇತರ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಜನರು ಗುಂಪುಗೂಡುತ್ತಿದ್ದು,

ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು  ಹರಡಲು ಕಾರಣವಾಗುತ್ತದೆ. ಜನಸಂಚಾರ ಮತ್ತು ಅವರು ಒಂದೆಡೆ ಗುಂಪುಗೂಡುವ ವಿಚಾರದಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮನವಿ ಮಾಡಿದರೂ ಇದಕ್ಕೆ ನಾಗರೀಕರು ಕಿವಿಗೊಡುತ್ತಿಲ್ಲ.  ಹೀಗಾದರೆ ಕೋವಿಡ್‌ 19 ಸೋಂಕಿನ ವಿರುದ ಹೋರಾಟ ಮಾಡಿ ಅದನ್ನು ಮಣಿಸುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next