Advertisement

ಪ್ಲಾಸ್ಟಿಕ್‌ ಮುಕ್ತ ಪಟ್ಟಣಕ್ಕೆ ಸಹಕರಿಸಿ

12:38 PM Oct 13, 2019 | Suhan S |

ಗಜೇಂದ್ರಗಡ: ಪಟ್ಟಣ ಪ್ಲಾಸ್ಟಿಕ್‌ ಮುಕ್ತವನ್ನಾಗಿಸಲು ಪಣತೊಟ್ಟಿರುವ ಪುರಸಭೆ ಪರಿಸರ ಕಾಳಜಿಗೆ ಕೈ ಜೋಡಿಸಿದ ಬಾಗಮಾರ ಸೇವಾ ಸಮಿತಿಯಿಂದ 500ಕ್ಕೂ ಅಧಿಕ ಬಟ್ಟೆ ಕೈ ಚೀಲ ನೀಡಲಾಯಿತು.

Advertisement

ಕಳೆದೊಂದು ವಾರದಿಂದ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ, ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್‌ ಮುಕ್ತವನ್ನಾಗಿಸಲು ನಿರಂತರವಾಗಿ ಶ್ರಮಿಸುತ್ತಿರುವ ಪುರಸಭೆ ಅಧಿಕಾರಿಗಳು ಪಟ್ಟಣದ ಜೋಡು ರಸ್ತೆ ಬಳಿಯ ಅಂಗಡಿಗಳಿಗೂ ತೆರಳಿ ಪ್ಲಾಸ್ಟಿಕ್‌ ವಸ್ತುಗಳನ್ನು ಉಪಯೋಗಿಸದಂತೆ ಕಟ್ಟು ನಿಟ್ಟಿನ ಆದೇಶ ನೀಡಿದರು.

ಪುರಸಭೆ ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದ ಪಟ್ಟಣದ ಬಾಗಮಾರ ಸೇವಾ ಸಮಿತಿಯ ಅಜೀತ ಬಾಗಮಾರ ಅವರು ತಮ್ಮ ಜೋಡು ರಸ್ತೆ ಬಳಿಯ ಬಟ್ಟೆ ಅಂಗಡಿಯಲ್ಲಿ 500ಕ್ಕೂ ಅಧಿಕ ಬಟ್ಟೆಯಿಂದ ಸಿದ್ಧಪಡಿಸಿದ ಕೈ ಚೀಲಗಳನ್ನು ಪುರಸಭೆ ಅಧಿಕಾರಿಗಳಿಗೆ ಉಚಿತವಾಗಿ ನೀಡಿದರು.

ಪುರಸಭೆ ಆರೋಗ್ಯ ಅಧಿಕಾರಿ ರಾಘವೇಂದ್ರಮಂತ್ರಾ, ಕಂದಾಯ ಅಧಿಕಾರಿ ಬಸವರಾಜ ಬಳಗಾನೂರ, ಶಿವಕುಮಾರ ಇಲ್ಲಾಳ, ಇಮಾಮ್‌ ಕಾಲಾನಾಯಕ್‌, ನಜೀರಸಾಬ ಸಾಂಗ್ಲಿಕಾರ, ಆನಂದ ಮಳಗಿ, ಹನುಮಂತ ಚಲವಾದಿ, ಶಿವಪ್ಪ ಮಾದರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next