Advertisement
ತಾಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ, ತಾಲೂಕಿನ ವಿವಿಧ ಇಲಾಖೆ ಮತ್ತು ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮ ಕೈಗೊಂಡು, ಸಮುದಾಯ ಭವನಗಳಿಗೆ ಹಣ ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು.
Related Articles
Advertisement
ಸಿಇಒ ಎಚ್ಚರಿಕೆ: ನೀರಿನ ಕೊರತೆಯಾದರೆ ಕೂಡಲೇ ಕೊಳವೆ ಬಾವಿಗಳು ಕೊರೆಸಿ ಸಮಸ್ಯೆ ಪರಿಹರಿಸುತ್ತೇನೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡಿಸುತ್ತೇನೆಂದು ಗುತ್ತಿಗೆದಾರ ಕೃಷ್ಣಾರೆಡ್ಡಿ ಅವರಿಗೆ ಸಲಹೆ ಮಾಡಿದರು. 14ನೇ ಹಣಕಾಸು ಯೋಜನೆಯ ಹಣ ಶೇ.50 ಭಾಗ ಕುಡಿಯುವ ನೀರಿಗೆ ಬಳಸಬೇಕು. ಉಳಿದ ಹಣ ರಸ್ತೆ ಅಭಿವೃದ್ಧಿ, ಕೊಳವೆ ಬಾವಿಗಳ ರಿಪೇರಿಗೆ ಬಳಸಬೇಕು. ಇಲ್ಲವಾದರೆ ಹಣ ಬಿಡಿಗಡೆ ಮಾಡುವುದಿಲ್ಲವೆಂದು ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಭವನ, ವಾಲ್ಮಿಕಿ ಸಮುದಾಯ ಭವನ, ಬಲಿಜಗರ ಸಮುದಾಯ ಭವನ ಸೇರಿದಂತೆ ನಾನಾ ಗ್ರಾಮಗಳಲ್ಲಿ ನಿರ್ಮಿಸಲು ಮಂಜೂರಾಗಿರುವ ಕಟ್ಟಡಗಳಲ್ಲಿ ಹಣ ತಿನ್ನುವುದು ಬೇಡ. ಎಲ್ಲಾ ಸಮುದಾಯಗಳಲ್ಲಿನ ಬಡವರಿಗೆ ಈಗ ಮಂಜೂರಾಗಿರುವ 3,800 ವಸತಿಗಳು ವಿತರಿಸಲು ಪಕ್ಷಾತೀತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಡವರಿಗೆ ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿ: ಲಕ್ಷ್ಮೀಪುರ, ಪುರಗೂರಕೋಟೆ, ಗೌನಿಪಲ್ಲಿ, ಕೋಡಿಪಲ್ಲಿ, ಲಕ್ಷ್ಮೀಸಾಗರ, ಬೈರಗಾನಹಳ್ಳಿ, ದಳಸನೂರು ಸೇರಿದಂತೆ 25 ಪಂಚಾಯ್ತಿಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಇನ್ನೂ ಗ್ರಾಮಗಳಲ್ಲಿ ಅಭಿವೃದ್ಧಿ ಆಗದ ರಸ್ತೆಗಳು ಮತ್ತು ಆಗಬೇಕಾಗಿರುವ ರಸ್ತೆಗಳ ಬಗ್ಗೆ ಪೂರ್ಣ ವಿವರ ಪಡೆದು ಜನರಿಗೆ ನೆರವಾಗುವಂತೆ ತಿಳಿಸಿದರು.
ಎ.ಕೊತ್ತೂರು, ಕರಿಪಲ್ಲಿ, ಚೀಲೇಪಲ್ಲಿ, ಬಂತೋನಿ ಕಟವ, ಜಿಂಕಲವಾರಿಪಲ್ಲಿ, ಮಂಚಿನೀಲ್ಲಕೋಟೆ ಸೇರಿದಂತೆ ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಗ್ರಾಮ, ತಾಡಿಗೋಳು 1 ಗ್ರಾಮ, ನೆಲವಂಕಿ 1 ಗ್ರಾಮ, ಪುಲಗೂರಕೋಟೆ, ಸೋಮಯಾಜಲಹಳ್ಳಿ ಸೇರಿದಂತೆ ವಿವಿಧಡೆಯಿಂದ ಸಮಸ್ಯೆ ಬಗ್ಗೆ ಕರೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಉಪವಿಭಾಗಾಧಿಕಾರಿ ವಿ.ಸೋಮಶೇಖರ್, ತಾಪಂ ಇಒ ಆನಂದ್, ವಿ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ಕುಮಾರ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.