Advertisement
ಗುರುವಾರ ಸಂಜೆ ವೇಳೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 3.77 ಮೀ. ಇದೆ. ನಗರದ ಬಹುತೇಕ ಮನೆಗಳಿಗೆ ನೀರಿನ ಕೊರತೆ ಮುಂದುವರಿದಿದೆ. ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿ ಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದೆ; ಆದರೆ ಟ್ಯಾಂಕರ್‌ಗಳಿಗೂ ಬೇಕಾದಷ್ಟು ನೀರು ಸದ್ಯ ಲಭಿಸುತ್ತಿಲ್ಲ.
ನಗರದಲ್ಲಿ ನೀರು ಅಭಾವವಿರುವ ಮನೆಗಳಿಗೆ “ಟೀಮ್ ಗರೋಡಿ’ ಸಂಘಟನೆ ನೇತೃತ್ವದಲ್ಲಿ ಉಚಿತ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗಿದೆ. ನೀರಿನ ಕೊರತೆ ಎದುರಾದ ಹಿನ್ನೆಲೆ ಯಲ್ಲಿ ನಗರದ ಕೆಲವು ಹೊಟೇಲ್‌ಗಳಲ್ಲಿ ಕಾಫಿ ತಿಂಡಿಯನ್ನು ಪೇಪರ್ ಪ್ಲೇಟ್ ಹಾಗೂ ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ನೀಡುತ್ತಿದ್ದಾರೆ. ಮನಪಾ ನೇತೃತ್ವದ ಮಂಗಳ ಈಜುಕೊಳಕ್ಕೂ ನೀರಿನ ಕೊರತೆ ತಟ್ಟಿದ್ದು, ಕೊಳಕ್ಕೆ ನೀರು ಲಭ್ಯತೆಗೂ ಆತಂಕ ಎದುರಾಗಿದೆ. ಈ ಹಿಂದೆ ಇದೇ ಸಮಸ್ಯೆಯಿಂದಾಗಿ ಕೆಲವು ಸಮಯ ಈಜುಕೊಳವನ್ನು ಮುಚ್ಚಲಾಗಿತ್ತು.
ಶೀಘ್ರದಲ್ಲಿ ಮಳೆಯಾಗುವ ಮೂಲಕ ನಗರದಲ್ಲಿ ನೀರಿನ ಕೊರತೆ ನಿವಾರಣೆಯಾಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.
Related Articles
ಮುಂಗಾರು ಮಳೆಯ ಅಭಾವ ದಿಂದ ತೀವ್ರ ನೀರಿನ ಸಮಸ್ಯೆ ಉದ್ಭವಿಸಿರುವ ಈ ಸಮಯದಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಅವರು, ಎಲ್ಲ ಕ್ರೈಸ್ತ ಧರ್ಮ ಕೇಂದ್ರಗಳು ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗ ಳಲ್ಲಿ ಮೇ 18 ಹಾಗೂ 19ರಂದು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲು ಕರೆ ನೀಡಿದ್ದಾರೆ. ದೇವರಲ್ಲಿ ವಿಶ್ವಾಸದಿಂದ ಮೊರೆ ಹೋದಾಗ ಬೇಡಿ ದನ್ನು ಖಂಡಿವಾಗಿಯೂ ನೆರವೇರಿಸು ತ್ತಾರೆ ಎಂದು ಬಿಷಪ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement