ಮುದ್ದೇಬಿಹಾಳ: ಸಚಿವ ಮುರುಗೇಶ ನಿರಾಣಿ, ಎಂಎಲ್‌ಸಿ ಹನುಮಂತ ನಿರಾಣಿ ಮಾಲಿಕತ್ವದ ಬೀಳಗಿಯ ಎಂಆರ್‌ಎನ್ (ನಿರಾಣಿ) ಫೌಂಡೇಶನ್ ವತಿಯಿಂದ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸಿಂಪಡಿಸಲು ಉಚಿತವಾಗಿ ಪೂರೈಸಲ್ಪಟ್ಟ 500 ಲೀಟರ್ ಸ್ಯಾನಿಟೈಸರ್ ಕ್ಯಾನ್‌ಗಳನ್ನು ಮಂಗಳವಾರ ಪುರಸಭೆ ಮುಖ್ಯಾ ಧಿಕಾರಿ ಗೋಪಾಲ ಕಾಸೆಯವರಿಗೆ ಬಿಜೆಪಿ ಮುಖಂಡರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ, ಕೊರೊನಾ ಮಹಾಮಾರಿ ಬೇಗ ನಿರ್ಮೂಲನೆ ಗೊಂಡು ಜನ ಮೊದಲಿನಂತೆ ಆರೋಗ್ಯವಂತ ರಾಗಿರ ಬೇಕು ಎಂದು ಆಶಿಸಿ ಅನೇಕರು ಸಹಾಯಕ್ಕೆ ಧಾವಿಸತೊಡಗಿದ್ದಾರೆ. ಅಂಥವರಲ್ಲಿ ಸಚಿವ ಮುರುಗೇಶ ನಿರಾಣಿಯವರೂ ಒಬ್ಬರು. ತಮ್ಮ ಮಾಲಿಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗಿರುವ ರಾಸಾಯನಿಕವನ್ನು ಸ್ಯಾನಿಟೈಸರ್ ರೂಪದಲ್ಲಿ ಬಳಸಲು ಎಲ್ಲ ಪುರಸಭೆ, ಪಪಂ, ಗ್ರಾಪಂಗಳಿಗೆ ಉಚಿತವಾಗಿ ಒದಗಿಸತೊಡಗಿದ್ದಾರೆ ಎಂದರು.
ಸ್ಯಾನಿಟೈಸರ್ ಹಂಚಿಕೆ ಉಸ್ತುವಾರಿ ಬಸವರಾಜ ನಂದಿಕೇಶ್ವರಮಠ ಮಾತನಾಡಿ, 25 ಲೀ. ನೀರಿನಲ್ಲಿ 1 ಲೀ. ಸ್ಯಾನಿಟೈಸರ್ ಹಾಕಿ ತಯಾರಿಸಿದ ದ್ರಾವಣವನ್ನು ಸ್ಪ್ರೆàಯರ್ ಗಳ ಮೂಲಕ ಸಿಂಪಡಿಸಬೇಕು. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಸ್ಯಾನಿಟೈಸರ್ ಕೊಡಲು ಫೌಂಡೇಶನ್ ಸಿದ್ಧವಿದೆ ಎಂದರು. ಮುಖ್ಯಾ ಧಿಕಾರಿ ಗೋಪಾಲ ಕಾಸೆ ಕ್ಯಾನ್ ಸ್ವೀಕರಿಸಿ ಮಾತನಾಡಿ, ದಾನಿಗಳ ನೆರವಿನಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವುದು ಹೆಚ್ಚು ಪರಿಣಾಮಕಾರಿಯಾಗಲಿದೆ. ಇದನ್ನು ಅಗತ್ಯ ಇರುವೆಡೆ, ಸೋಂಕಿನ ಪಾಸಿಟಿವ್ ಇರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಸಿಂಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪುನೀತ್ ಹಿಪ್ಪರಗಿ, ಪ್ರಕಾಶ ಮಠ, ಅಶೋಕ ರೇವಡಿ, ಸುಭಾಷ್ ಬಿದರಕುಂದಿ, ಶಿವಕುಮಾರ ಶಾರದಳ್ಳಿ, ನಿಂಗರಾಜ ಮಹಿಂದ್ರಕರ, ಪುರಸಭೆ ಕಂದಾಯ ನಿರೀಕ್ಷಕಿ ಎಂ.ಬಿ. ಮಾಡಗಿ ಸೇರಿ ಹಲವರು ಇದ್ದರು