ಬಸವನಬಾಗೇವಾಡಿ: ಸಚಿವ ಮುರುಗೇಶ ನಿರಾಣಿ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾಲೀಕತ್ವದ ಬೀಳಗಿಯ ನಿರಾಣಿ ಫೌಂಡೇಶನ್ ವತಿಯಿಂದ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸಿಂಪಡಿಸಲು ಉಚಿತವಾಗಿ 50 ಲೀ.ನ ಹೈಪೋಕ್ಲೋರೈಡ್ ದ್ರಾವಣದ 15 ಕ್ಯಾನ್‌ಗಳನ್ನು ಪುರಸಭೆ ಮುಖ್ಯಾ ಧಿಕಾರಿ ಬಿ.ಎ. ಸೌದಾಗಾರ ಅವರಿಗೆ ಹಸ್ತಾಂತರಿಸಲಾಯಿತು.
ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ನಿರಾಣಿ ಗುರುವಾರ ಪಟ್ಟಣದ ಸೇವಾ ಭಾರತಿ ಟ್ರಸ್ಟ್ ಸಹಯೋಗದಲ್ಲಿ ನಿರಾಣಿ ಫೌಂಡೇಶನ್ ವತಿಯಿಂದ ಸೋಂಕು ನಿವಾರಕ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದ ಕ್ಯಾನ್‌ಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ದೇಶ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಪಡಿಸುವ ದ್ರಾವಣವನ್ನು ನಿರಾಣಿ ಫೌಂಡೇಶನ್ ವತಿಯಿಂದ ವಿಜಯಪುರ-ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಕೊರೊನಾದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ತಮ್ಮ ತಮ್ಮ ಊರು ಮತ್ತು ಗ್ರಾಮಗಳಲ್ಲಿ ಸ್ವತ್ಛತೆಗೆ ಮೊದಲ ಆದ್ಯತೆ ನೀಡಬೇಕು.
ಜನರು ಕೂಡಾ ಸರಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಕೊರೊನಾ ಸೋಂಕನ್ನು ತಡೆಗಟ್ಟಲು ಶ್ರಮಿಸಬೇಕು ಎಂದು ಹೇಳಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಕೋವಿಡ್-19 ಜಗತ್ತನ್ನೆ ತಲ್ಲಣಗೊಳಿಸಿದೆ. 130 ಕೋಟಿ ಜನಸಂಖ್ಯೆ ಹೊಂದಿದ ನಮ್ಮ ದೇಶದಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದಿಗª ಪರಿಸ್ಥಿಯಲ್ಲಿ ಪ್ರತಿಯೊಬ್ಬರೂ ಮಾನಸಿಕವಾಗಿ ಧೈರ್ಯ ಹೊಂದಬೇಕು.
ಸರಕಾರ ಸೇರಿದಂತೆ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಢಿಸುವುದರೊಂದಿಗೆ ಅಗತ್ಯ ನೆರವು ನೀಡುತ್ತಿರುವುದು ಸ್ವಾಗತಾರ್ಹ ಎಂದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದ, ಸದಸ್ಯರಾದ ಪ್ರವೀಣ ಪವಾರ, ಪ್ರವೀಣ ಪೂಜಾರಿ, ಜಗದೇವಿ ಗುಂಡಳ್ಳಿ, ದೇವೇಂದ್ರ ವಚಾØಣ, ರಾಜು ಮುಳವಾಡ, ಪರಶುರಾಮ ಜಮಂಖಡಿ, ಸುರೇಶ ಲಮಾಣಿ, ಎಪಿಎಂಸಿ ನಿದೇರ್ಶಕ ಮುದಕಣ್ಣ ಹೊರ್ತಿ, ಮುಖಂಡರಾದ ಶಿವಲಿಂಗಯ್ಯ ತೆಗ್ಗಿನಮಠ, ಬಸವರಾಜ ಬಿಜಾಪುರ, ಸಂಜೀವ ಕಲ್ಯಾಣಿ, ಕಲ್ಲು ಸೊನ್ನದ, ಎಜಿಎಂ ಪಿ.ಎ. ಪಾಟೀಲ, ತಾಪಂ ಇಒ ಭಾರತಿ ಚಲುವಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ ಪಾಟೀಲ ಇದ್ದರು.