Advertisement
ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ರಾಮನಾಥಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಹಲವು ವರ್ಷಗಳ ಹಿಂದೆ ಅಳವಡಿಸಿರುವ ಪಂಪ್‌ಹೌಸ್ ಹಾಗೂ ಪೈಪುಗಳು ಶಿಥಿಲವಾಗಿವೆ. ಗ್ರಾಮ ಪಂಚಾಯ್ತಿಯು ನದಿಯಿಂದ ನೀರು ಶುದ್ಧೀಕರಿಸದೇ, ಕಲುಷಿತ ನೀರು ಪೂರೈಕೆ ಮಾಡುತ್ತಿದೆ. ನದಿಯಲ್ಲಿ ಕೆಲವು ಬಾರಿ ಮಲಿನ ನೀರು ಹರಿಯುವಾಗ ಆದೇ ನೀರನ್ನು ಕುಡಿಯಬೇಕಾದ ಅನಿವಾರ್ಯ ಸ್ಥಿತಿ ರಾಮನಾಥಪುರದ ಜನರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Related Articles
Advertisement
ಯಂತ್ರಕ್ಕೆ ಪ್ರಸ್ತಾವನೆ : ರಾಮನಾಥಪುರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗ ಬೇಕಾದರೆ ನೀರು ಶುದ್ಧೀಕರಣ ಯಂತ್ರದ ಅಳವಡಿಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಹಾಸನ ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ನೀರು ಶುದ್ಧೀಕರಣ ಯಂತ್ರದ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಪಿಡಿಒ ವಿಜಯಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನದಿಯ ದಂಡೆಯಲ್ಲಿ ಮಾಟ- ಮಂತ್ರ ತಡೆ ಹಿಡಿಯುವುದು ಸೇರಿದಂತೆ ಸ್ವತ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಮನಾಥಪುರಕ್ಕೆ ಕುಡಿಯುವ ನೀರಿನ ಕೊರತೆಯೇನೂ ಇಲ್ಲ. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ನೀರಿನ ಮೂಲದಿಂದ ಬಳಕೆದಾರರವರೆಗೆ ಬರುವ ಮಾರ್ಗದಲ್ಲಿ ಉಂಟಾಗಬಹುದಾದ ಸೋರಿಕೆಯಿಂದಾಗಿ ನೀರು ವ್ಯರ್ಥವಾಗುವುದರ ಜೊತೆಗೆ ಕಲುಷಿತಗೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಅತಿಸಾರ, ಕರಳುಬೇನೆ, ರಕ್ತಭೇದಿ, ಕಾಲರಾ ಮುಂತಾದಕಾಯಿಲೆಗಳು ಹರಡದಂತೆ ತಡೆಯಬೇಕಾದರೆ ಶುದ್ಧಕುಡಿಯುವ ನೀರು ಪೂರೈಕೆಯಾಗಬೇಕು. ಗ್ರಾಪಂ ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಆನಂತರ ಇನ್ನಿತರೆ ಕೆಲಸಗಳನ್ನು ಮಾಡಲಿ. –ಎಚ್.ಎಸ್.ಶಂಕರ್, ಜಿಪಂ ಮಾಜಿ ಸದಸ್ಯ