ಲಾಕ್‌ಡೌನ್ ನಡುವೆಯೇ, ರಿನಾಲ್ಟ್ ಟ್ರೈಬರ್ ಆಟೊಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಲಾಕ್ ಡೌನ್‌ನಿಂದಾಗಿ, ಆಟೋಮೊಬೈಲ್ ಮಾರುಕಟ್ಟೆ ಕುಸಿದಿದೆ ಎಂದುಕೊಳ್ಳುತ್ತಿರುವಾಗಲೇ,ಈ ಕಾರು ಲಾಂಚ್ ಆಗಿರುವುದು, ಆಶಾಭಾವದ ಸಂಗತಿ. ಸದ್ಯ, ಆನ್‌ಲೈನ್ ಮತ್ತು ಆ್ಯಪ್ ಮೂಲಕ ಈ ಕಾರಿನ ಬುಕಿಂಗ್ ಕೂಡ ಆರಂಭವಾಗಿದೆ. ಡೀಲರ್‌ಶಿಪ್ ಗಳೂ ಓಪನ್ ಆಗಿವೆ. ಗ್ರಾಹಕರು ಟೆಸ್ಟ್ ಡ್ರೈವ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲಿಯೇ ಡಿಲೆವರಿಯನ್ನೂ ಆರಂಭಿಸಲಾಗುವು ದು ಎಂದು ಕಂಪನಿ ಹೇಳಿದೆ.
ಮೂರು ಮಾದರಿ: ಆಟೊಮ್ಯಾಟಿಕ್ ವರ್ಷನ್‌ನಲ್ಲಿ ಮೂರು ಮಾದರಿಗಳಿವೆ. ಆರ್‌ಎಕ್ಸ್‌ಎಲ, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಝಡ್. ಆದರೆ, ಮ್ಯಾನ್ಯುಯಲ್ ವರ್ಷನ್‌ಗಿಂತ 40 ಸಾವಿರ ರೂ. ಹೆಚ್ಚು ದರವಿದೆ. ಎಎಂಟಿ ವರ್ಷನ್ ಜತೆಗೆ, ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ ಎಂಬುದು ಕಂಪನಿಯ ಹೇಳಿಕೆ. ಇತ್ತೀಚಿನ ದಿನಗಳಲ್ಲಿ, ಎಎಂಟಿ ಎಲ್ಲ ಕಡೆ ಪ್ರಸಿದಿಟಛಿಯಾ ಗುತ್ತಿದ್ದು, ಜನರ ಅನುಕೂಲಕ್ಕೆ ತಕ್ಕಂತೆ ರೂಪಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
1 ಲೀ. ಎಂಜಿನ್ ಸಾಮರ್ಥ್ಯ: ರಿನಾಲ್ಟ್ ಟ್ರೈಬರ್ ಬಿಆರ್10 1.0 ಲೀಟರ್ ಡ್ನೂಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಬಿಎಸ್ 6 ಎಂಜಿನ್‌ನ ಇದರಲ್ಲಿ 3 ಸಿಲಿಂಡರ್‌ಗಳಿವೆ.
ಬರಲಿವೆ ಮತ್ತಷ್ಟು ಕಾರು: ಲಾಕ್‌ಡೌನ್ ಸಡಿಲವಾಗುತ್ತಿರುವ ಹಿನ್ನೆಲೆಯಲ್ಲಿ, ನಿಸಾನ್, ಹೊಂಡಾ, ಕಿಯಾ, ಮಾರುತಿ ಸುಜುಕಿ ಸೇರಿದಂತೆ, ಹಲವಾರು ಕಾರು ಕಂಪನಿಗಳು, ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕಾಯುತ್ತಿವೆ. ಅದರಲ್ಲಿ, ಮಾರುತಿ ಸುಜುಕಿ ಕಂಪನಿಯ, ಕ್ರಾಸ್ ಓವರ್ ಎಸ್- ಕ್ರಾಸ್ 1.5 ಲೀ. ಎಂಜಿನ್ ಸಾಮರ್ಥ್ಯದ ಕಾರು ಬಿಡುಗಡೆಗೆ ರೆಡಿಯಾಗಿದೆ. ಹಾಗೆಯೇ, ಹುಂಡೈ ಕಂಪನಿಯ ಎಲೆಂಟ್ರಾ 1.5 ಲೀ. ಡೀಸಲ್ ಕಾರು ಕೂಡ ರಿಲೀಸ್‌ಗೆ ಸಿದಟಛಿವಾಗಿದೆ. ಇದು ಫೇಸ್‌ಲಿಫಸ್ಟ್ ಕಾರಾಗಿದ್ದು, ಬಿಎಸ್6 ಎಂಜಿನ್‌ನೊಂದಿಗೆ ಬರಲಿದೆ. ರಿನಾಲ್ಟ್ ಡಸ್ಟರ್ 1.3 ಟಬೋ ಪೆಟ್ರೋಲ್ ಎಂಜಿನ್‌ನ ಕಾರು ಕೂಡ, ಸದ್ಯದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಕಾರುಗಳ ಪಟ್ಟಿ ಡಸ್ಟನ್ ರೆಡಿ ಗೋ ಫೇಸ್ ಲಿಫ್ಟ್, ಹೋಂಡಾ ಜಾಜ, ಹೋಂಡಾ ಡಬ್ಲ್ಯೂಆರ್-ವಿ ಫೇಸ್‌ಲಿಫ್ಟ್, ಕಿಯಾ ಸೋನೆಟ್, ನಿಸಾನ್ ಮ್ಯಾಗ್ನೆಟ್, ಸ್ಕೋಡಾ ರ್ಯಾಪಿಡ್, ಟೊಯೊಟಾ ಅರ್ಬನ್ ಕ್ರ್ಯೂಸರ್, ನ್ಯೂ ಹೋಂಡಾ ಸಿಟಿ, ಮಹೀಂದ್ರಾ ಮರಾಜೋ ಬಿಎಸ್ 6, ನ್ಯೂ ಮಹೀಂದ್ರಾ ಥಾರ್, ಮಹೀಂದ್ರಾ ಎಕ್ಸ್‌ಯುವಿ300, ಎಂಜಿ ಹೆಕ್ಟರ್ ಪ್ಲಸ್, ನಿಸಾನ್ ಕಿಕ್ಸ್ ಬಿಎಸ್ 6, ಹುಂಡೈ ಟಸ್ಕನ್ ಫೇಸ್‌ಲಿಫ್ಟ್, ಇತರೆ…
* ಸೋಮಶೇಖರ್ ಸಿ.ಜೆ