Advertisement

ಎಮರಾಲ್ಡ್‌ ಕೆಡವಲು ತಂತ್ರ ಯಾವುದಯ್ಯಾ?

10:51 PM Sep 01, 2021 | Team Udayavani |

ನೋಯ್ಡಾದ “ಸೆಕ್ಟರ್‌ 93’ಯಲ್ಲಿ ನಿಯಮ ಮೀರಿ ಕಟ್ಟಲಾಗಿದ್ದ ಸೂಪರ್‌ಟೆಕ್‌ ಎಂಬ ರಿಯಲ್‌ ಎಸ್ಟೇಟ್‌ ಸಂಸ್ಥೆಯ “ಎಮರಾಲ್ಡ್‌ ಕೋರ್ಟ್‌’ ವಸತಿ ಸಮುತ್ಛಯವನ್ನು ಕೆಡವುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿರುವ ಕಟ್ಟಡ ಕೆಡವುವ ತಂತ್ರಗಾರಿಕೆಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ. 

Advertisement

ತಂತ್ರಗಾರಿಕೆಗಳ ವ್ಯತ್ಯಾಸ :   

ಜನಸಂದಣಿ ಇರುವೆಡೆ ಕಟ್ಟಡಗಳನ್ನು ಕೆಡವಲು ಇಂಪ್ಲೋಷನ್‌ ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದು ಕಟ್ಟಡದ ಕೆಳಭಾಗದಲ್ಲಿ ಸ್ಫೋಟಕಗಳನ್ನು ಒಮ್ಮೆಲೇ ಸ್ಫೋಟಿಸಿ, ಕಟ್ಟಡದ ಅವಶೇಷ ಕಟ್ಟಡದ ಜಾಗದಲ್ಲೇ ಬೀಳುವಂತೆ ಮಾಡುವ ಕ್ರಮ. ಹಾಲಿ ಕಟ್ಟಡಕ್ಕೆ ಇದೇ ಕ್ರಮ ಅಳವಡಿಸಲು ಚಿಂತನೆ ನಡೆಲಾಗಿದೆ. ಇನ್ನು, ಜ್ಯಾಕಿಂಗ್‌ ಮಾದರಿಯಲ್ಲಿ ಕೂಲಿಯಾಳುಗಳಿಂದ, ಜೆಸಿಬಿ, ಬುಲ್ಡೋಜರ್‌ಗಳಿಂದ ಕಟ್ಟಡವನ್ನು ಮೇಲಿನಿಂದ ಕೆಳಕ್ಕೆ ಕೆಡವುತ್ತಾ ಬರಲಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕು. ಹಾಗಾಗಿ, ಹಾಲಿ ಕಟ್ಟಡಕ್ಕೆ ಇಂಪ್ಲೋಷನ್‌ ಪದ್ಧತಿ ಅನುಸರಿಸಲು ಸ್ಥಳೀಯಾಡಳಿತ ನಿರ್ಧರಿಸಿದೆ ಎನ್ನಲಾಗಿದೆ.

ಇಂಪ್ಲೋಷನ್‌ ಅನುಷ್ಠಾನ ಹೇಗೆ? :

  • ಕಟ್ಟಡದ ಬ್ಲೂ ಪ್ರಿಂಟ್‌ ಬಗ್ಗೆ ತಜ್ಞರ ಅಧ್ಯಯನ
  • ಕಟ್ಟಡದ ಯಾವ ಭಾಗಗಳಲ್ಲಿ ಸ್ಫೋಟಕ ಜೋಡಿಸಬೇಕು ಎಂದು ತಜ್ಞರು ನಿರ್ಧರಿ ಸುತ್ತಾರೆ. ಕಟ್ಟಡದ ಸುತ್ತಲಿನ 50 ಮೀ. ನಿಂದ 100 ಮೀ.ವರೆಗಿನ ಜನರನ್ನು ತೆರವುಗೊಳಿಸಲಾಗುತ್ತದೆ.
  • ಸ್ಫೋಟದಿಂದ ಏಳುವ ಧೂಳು, ಕಟ್ಟಡದ ಅವಶೇಷಗಳು ಚದುರುವಿಕೆಯ ದೂರವನ್ನು ಮೊದಲೇ ಊಹಿಸಿ ಸೀಲ್‌ ಮಾಡಲಾಗುತ್ತದೆ.
  • ಸ್ಫೋಟಕಗಳನ್ನು ಒಂದೇ ಸಾರಿ ಸ್ಫೋಟಿಸ ಲಾಗುತ್ತದೆ. ತಳಭಾಗ ಸ್ಫೋಟವಾಗುವು ದರಿಂದ ಕಟ್ಟಡ ಒಂದೇ ಕಡೆ ಕುಸಿದುಬೀಳುತ್ತದೆ.

ಕೇರಳದಲ್ಲಿ ಹೀಗೇ ಕೆಡವಲಾಗಿತ್ತು! :

Advertisement

ಕಳೆದ ವರ್ಷ, ಕೇರಳದ ಮರಡು ಎಂಬಲ್ಲಿ ನಿಯಮ ಮೀರಿ ನಿರ್ಮಿಸಲಾಗಿದ್ದ ಗೋಲ್ಡನ್‌ ಕಯಲೋರಂ ಕಟ್ಟಡದಲ್ಲಿ 150 ತೂತುಗಳನ್ನು ಕೊರೆದು, 15 ಕೆಜಿ ಸ್ಫೋಟಕದ ಸಹಾಯದಿಂದ ಇಡೀ ಕಟ್ಟಡವನ್ನು ಕೆಡವಲಾಗಿತ್ತು. ಕಟ್ಟಡಕ್ಕೆ ಹತ್ತಿರವಾಗಿದ್ದ ಅಂಗನವಾಡಿಗೆ ಯಾವುದೇ ತೊಂದರೆಯಾಗಿರಲಿಲ್ಲ.

1,000 : ಅವಳಿ ಟವರ್‌ಗಳಲ್ಲಿ ಇರುವ ಒಟ್ಟು ಫ್ಲಾಟ್‌ಗಳ ಸಂಖ್ಯೆ

3  : ತಿಂಗಳು – ಕಟ್ಟಡ ಕೆಡವಲು ಸುಪ್ರೀಂ ನೀಡಿರುವ ಗಡುವು

40 : ಅಂತಸ್ತು  ಎಮೆರಾಲ್ಡ್‌ ಕಟ್ಟಡದ ಅವಳಿ ಟವರ್‌ಗಳು ಇರುವ ಅಂತಸ್ತುಗಳು.

Advertisement

Udayavani is now on Telegram. Click here to join our channel and stay updated with the latest news.

Next