ಅನಿರುದ್ಧ್ ಮೊದಲ ಬಾರಿಗೆ ಆ್ಯಕ್ಷನ್ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವ “ರಾಜಾಸಿಂಹ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಯಶ್ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದರು. ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಝಲಕ್ ಅನ್ನು ಅಂದು ಪ್ರದರ್ಶಿಸಲಾಯಿತು. ಸಹಜವಾಗಿಯೇ ಅನಿರುದ್ಧ್ ಎಕ್ಸೆ„ಟ್ ಆಗಿದ್ದರು. ಅದಕ್ಕೆ ಮುಖ್ಯವಾಗಿ ಎರಡು ಕಾರಣ.
ಮೊದಲನೇಯದಾಗಿ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ “ಸಿಂಹಾದ್ರಿಯ ಸಿಂಹ’ ಚಿತ್ರದ ನರಸಿಂಹೇಗೌಡ ಪಾತ್ರ ಇಲ್ಲಿ ಮುಂದುವರಿದಿದ್ದು ಒಂದಾದರೆ, ಮೊದಲ ಬಾರಿಗೆ ಆ್ಯಕ್ಷನ್ ಸಿನಿಮಾ ಮಾಡಿದ್ದು ಮತ್ತೂಂದು. “ಇವತ್ತು ಈ ಸಿನಿಮಾ ಆಗಿದೆ ಎಂದರೆ ಅದಕ್ಕೆ ಕಾರಣ ಅಪ್ಪಾವ್ರ (ವಿಷ್ಣುವರ್ಧನ್) ಶಕ್ತಿ. ಚಿತ್ರೀಕರಣ ಮಧ್ಯೆ ಸಾಕಷ್ಟು ಸಮಸ್ಯೆಗಳು ಎದುರಾದಾಗ ಅಪ್ಪಾವ್ರನ್ನ ನೆನೆಸಿಕೊಂಡೆವು. ಎಲ್ಲವೂ ಸುಲಭವಾಗಿ ಬಗೆಹರಿಯಿತು.
ಚಿತ್ರದಲ್ಲಿ ಅಂಬರೀಶ್ ಅವರು ಕೂಡಾ ಕೇಳಿದ ಕೂಡಲೇ ಒಪ್ಪಿಕೊಂಡು ಬಂದು ನಟಿಸಿದರು. ಚಿತ್ರಕ್ಕೆ ಸಾಧು ಕೋಕಿಲ ಹಿನ್ನೆಲೆ ಸಂಗೀತ ನೀಡಬೇಕೆಂಬುದು ನಮ್ಮ ಆಸೆಯಾಗಿತ್ತು. ಅದರಂತೆ ಸಾಧುಕೋಕಿಲ ಕೂಡಾ ಒಪ್ಪಿಕೊಂಡರು. ಚಿತ್ರದಲ್ಲಿನ ತಾಯಿಯ ಪಾತ್ರವನ್ನು ಅಮ್ಮಾವ್ರ (ಭಾರತಿ ವಿಷ್ಣುವರ್ಧನ್) ಮಾಡಿದ್ದಾರೆ. ಅವರು ನನಗಾಗಿ ಮಾಡಿಲ್ಲ. ಪಾತ್ರ ಚೆನ್ನಾಗಿತ್ತೆಂಬ ಕಾರಣಕ್ಕೆ ನಟಿಸಿದ್ದಾರೆ’ ಎಂದರು ಅನಿರುದ್ಧ್.
ಮೊದಲ ಬಾರಿಗೆ ಆ್ಯಕ್ಷನ್‌ಚ ಸಿನಿಮಾವಾದ್ದರಿಂದ ಸ್ವಲ್ಪ ಭಯವಿತ್ತಂತೆ. ಆದರೆ, ಇಡೀ ತಂಡದ ಶ್ರಮದಿಂದ ಸಿನಿಮಾ ಚೆನ್ನಾಗಿ ಬಂದಿದೆ. ಆ್ಯಕ್ಷನ್ ದೃಶ್ಯಗಳು ಕೂಡಾ ಅದ್ಭುತವಾಗಿ ಮೂಡಿಬಂದಿವೆ’ ಎನ್ನುವುದು ಅನಿರುದ್ಧ್ ಮಾತು. “ಸಾಹಸ ಸಿಂಹ’ ಚಿತ್ರದ ಸಮಯದಲ್ಲಿ ವಿಷ್ಣುವರ್ಧನ್ ಅವರು ಆ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಶ್ರಮ ಹಾಕಿದ್ದನ್ನು ನೋಡಿದ ಭಾರತಿ ವಿಷ್ಣುವರ್ಧನ್ ಅವರಿಗೆ ಈಗ ಅನಿರುದ್ಧ್ ಕೂಡಾ ಅದೇ ರೀತಿ “ರಾಜಾ ಸಿಂಹ’ ಚಿತ್ರದಲ್ಲಿ ಶ್ರಮ ಹಾಕಿ,
ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದನ್ನು ನೋಡಿದರಂತೆ. ಚಿತ್ರವನ್ನು ಸಿ.ಡಿ. ಬಸಪ್ಪ ಅವರು ನಿರ್ಮಿಸಿದ್ದಾರೆ. ಅವರ ಪ್ರಕಾರ, ಈ ಚಿತ್ರ ವಿಷ್ಣುವರ್ಧನ್ ಅಭಿಮಾನಿಗಳ ಸಂಗಮವಂತೆ. ಇನ್ನು, “ರಾಜಾ ಸಿಂಹ’ ಆ್ಯಕ್ಷನ್ ಸಿನಿಮಾ ಎಂದಾಗ ಮೊದಲು ಭಯವಾಯಿತಂತೆ. ಆದರೆ, ಅನಿರುದ್ಧ್ ಅವರ ಎನರ್ಜಿ ಹಾಗೂ ಅವರು ಸಿನಿಮಾವನ್ನು ಪ್ರೀತಿಸುವುದನ್ನು ನೋಡಿ ಭಯ ದೂರವಾಯಿತಂತೆ.
ಚಿತ್ರವನ್ನು ರವಿರಾಮ್ ನಿರ್ದೇಶಿಸಿದ್ದಾರೆ. “ಸಾಧಾರಣ ಸಿನಿಮಾ ಮಾಡಲು ಹೋಗಿ ಒಂದು ಅದ್ಭುತ ಸಿನಿಮಾ ಮಾಡಿದ್ದೇನೆ’ ಎನ್ನುವುದು ಅವರ ಮಾತು. ಉಳಿದಂತೆ ಚಿತ್ರದಲ್ಲಿ ನಟಿಸಿದ ಸಂಜನಾ, ಚಿತ್ರಕ್ಕೆ ಹಾಡು ಬರೆದ ಕವಿರಾಜ್ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಅನೇಕರು ಭಾಗವಹಿಸಿದ್ದರು.