Advertisement
ಗುರುವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲೂ ಈ ತಂಡಗಳು ಎದುರಾಗಿದ್ದವು. ಇದರಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್‌ನೋವಾಸ್ 12 ರನ್ನುಗಳಿಂದ ವೆಲೋಸಿಟಿ ತಂಡವನ್ನು ಮಣಿಸಿತು. ಇದರೊಂದಿಗೆ ಮೂರೂ ತಂಡಗಳು ತಲಾ ಒಂದು ಗೆಲುವು, ಒಂದು ಸೋಲಿನೊಂದಿಗೆ ಲೀಗ್ ವ್ಯವಹಾರ ಮುಗಿಸಿದವು. ಆದರೆ ರನ್‌ರೇಟ್‌ನಲ್ಲಿ 3ನೇ ಸ್ಥಾನಕ್ಕಿಳಿದ ಸ್ಮತಿ ಮಂಧನಾ ನೇತೃತ್ವದ ಟ್ರೈಬ್ಲೇಜರ್ ಕೂಟದಿಂದ ಹೊರಬಿತ್ತು.
ಅಂತಿಮ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೂಪರ್‌ನೋವಾಸ್ 3 ವಿಕೆಟಿಗೆ 142 ರನ್ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ವೆಲೋಸಿಟಿ ಮಧ್ಯಮ ಕ್ರಮಾಂಕದ ಉತ್ತಮ ಹೋರಾಟದ ಹೊರತಾಗಿಯೂ 3 ವಿಕೆಟಿಗೆ 130 ರನ್ ಮಾತ್ರ ಗಳಿಸಿ ಶರಣಾಯಿತು. ಆದರೆ ಈ ಸೋಲಿನಿಂದ ಮಿಥಾಲಿ ರಾಜ್ ಪಡೆಯ ಫೈನಲ್ಗೆ ಯಾವುದೇ ಅಡ್ಡಿಯಾಗಲಿಲ್ಲ. ಚೇಸಿಂಗ್ ವೇಳೆ ಹ್ಯಾಲಿ ಮ್ಯಾಥ್ಯೂಸ್ (11) ಮತ್ತು ಶಫಾಲಿ ವರ್ಮ (2) ಅವರನ್ನು ವೆಲೋಸಿಟಿ ಬೇಗನೆ ಕಳೆದುಕೊಂಡಿತು. ಬಳಿಕ ಡೇನಿಯಲ್ ವ್ಯಾಟ್ (43), ಮಿಥಾಲಿ ರಾಜ್ (ಔಟಾಗದೆ 40) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 30) ಉತ್ತಮ ಹೋರಾಟವನ್ನೇನೋ ಸಂಘಟಿಸಿದರು, ಆದರೆ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು.
Related Articles
Advertisement
ಸಂಕ್ಷಿಪ್ತ ಸ್ಕೋರ್ಸೂಪರ್ನೋವಾಸ್-3 ವಿಕೆಟಿಗೆ 142 (ಜೆಮಿಮಾ ಔಟಾಗದೆ 77, ಚಾಮರಿ 31, ಅಮೇಲಿಯಾ ಕೆರ್ 21ಕ್ಕೆ 2). ವೆಲೋಸಿಟಿ-3 ವಿಕೆಟಿಗೆ 130 (ವ್ಯಾಟ್ 43, ಮಿಥಾಲಿ ಔಟಾಗದೆ 40, ವೇದಾ ಔಟಾಗದೆ 30, ಪೂನಂ 13ಕ್ಕೆ 1).