Advertisement
ಚಂದ್ರನ ಪಥ ದೀರ್ಘ ವೃತ್ತಾಕಾರ. ಇದು ಒಮ್ಮೊಮ್ಮೆ ಭೂಮಿಗೆ ಹತ್ತಿರವೂ ಒಮ್ಮೊಮ್ಮೆ ದೂರವೂ ಇರುತ್ತದೆ. ಸಮೀಪವಿರುವ ದೂರವನ್ನು ಪೆರಿಜಿ ಎಂದೂ ದೂರದ ದೂರವನ್ನು ಅಪೊಜಿ ಎಂದೂ ಕರೆಯುತ್ತಾರೆ.
ಪ್ರತೀ ಹುಣ್ಣಿಮೆ ಹಾಗೂ ಅಮಾ ವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು ಸರಿಸುಮಾರು ನೇರ ವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ ಹೆಚ್ಚಿನ ಬಲವುಂಟಾಗಿ ಭರತ-ಇಳಿತಗಳು ಜೋರಾಗಿರುತ್ತವೆ. ಪ್ರತೀ ಹುಣ್ಣಿಮೆ ಯಲ್ಲೂ ಅಮಾವಾಸ್ಯೆ ದಿನದಂದೂ ಗುರುತ್ವಾಕರ್ಷಣ ಬಲ ಹೆಚ್ಚಿಗೆ ಇರುತ್ತದೆ. ಸೂರ್ಯ, ಚಂದ್ರರಿಬ್ಬರ ಬಲವಿದ್ದರೂ ಚಂದ್ರನ ಬಲ ಸಮುದ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೂರೂ ಸರಳ ರೇಖೆಯಲ್ಲಿರುವುದರಿಂದ ಗುರುತ್ವಾಕರ್ಷಣೆ ಬಲದಿಂದ ಸಮುದ್ರ ಉಬ್ಬಿದಂತಾಗುತ್ತದೆ. ಸುಮಾರು ಎರಡು ಅಡಿ ನೀರಿನ ಮಟ್ಟ ಹೆಚ್ಚಿರುತ್ತದೆ. ತಿಂಗಳ ಉಳಿದ 28 ದಿನಗಳಲ್ಲಿ ಸಹಜವಾಗಿರುತ್ತದೆ.
Related Articles
Advertisement
ಎಲ್ಲೆಲ್ಲಿ ಗೋಚರ?ಈ ಅಪರೂಪದ ಖಗೋಳ ವಿಸ್ಮಯ ವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಈಶಾನ್ಯ ಭಾರತೀಯರಿಗೆ ಮಾತ್ರವೇ ಲಭಿಸಲಿದೆ. ಈ ಭಾಗದಲ್ಲಿ ಅಪರಾಹ್ನ 3.14ಕ್ಕೆ ಆರಂಭಗೊಳ್ಳಲಿರುವ ಗ್ರಹಣ ಸಂಜೆ 6.23ಕ್ಕೆ ಅಂತ್ಯಗೊಳ್ಳಲಿದೆ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್ ಸಾಗರದ ಮಧ್ಯ ಭಾಗ, ಆಸ್ಟ್ರೇಲಿಯ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರವಾಗಲಿದೆ. ಎಚ್ಚರಿಕೆ ಅಗತ್ಯ
ಇವುಗಳೆಲ್ಲದರ ಜತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಚಂಡ ಮಾರುತವೂ ಈ ದಿನ ಅಬ್ಬರಿಸುವುದರಿಂದ ಪಶ್ಚಿಮ ತೀರದಲ್ಲಿ ಕಡಲು, ಹೆಚ್ಚಿನ ಅಲೆಗಳಿಂದ ಭರತ- ಇಳಿತಗಳ ವ್ಯತ್ಯಾಸ ಹೆಚ್ಚಿರಬಹುದು. ಇದು ಈ ದಿನವೇ ಇರಬಹುದು ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು. ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ. ರೆಡ್ ಬ್ಲಿಡ್ ಮೂನ್
ಈ ಸೂಪರ್ ಮೂನ್ ಭೂಮಿಗೆ ಅತೀ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ. ಅಂತರದಲ್ಲಿ ಬರಲಿದೆ. (ಸರಾಸರಿ ದೂರ 3,84,000 ಕಿ.ಮೀ.). ಈ ವರ್ಷ ಮಾ. 28, ಎ.27ರಂದು ಎರಡು ಸೂಪರ್ ಮೂನ್ ಆಗಿದೆ. ಜೂ. 24ರಂದು ಇನ್ನೊಂದು ಸೂಪರ್ ಮೂನ್ ಆಗಲಿದೆ. ಆದರೆ ಈ ಸೂಪರ್ ಮೂನ್ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಸೂಪರ್ ಮೂನ್ ದಿನಗಳಲ್ಲಿ 24 ಅಂಶ ಹೆಚ್ಚು ಪ್ರಭೆಯಿಂದಲೂ, 14 ಅಂಶ ದೊಡ್ಡದಾಗಿಯೂ ಚಂದ್ರ ಗೋಚರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್ ಬ್ಲಿಡ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ. – ಡಾ| ಎ. ಪಿ. ಭಟ್, ಉಡುಪಿ