Advertisement
ಇಪ್ಪತ್ತೈದು, ಮೂವತ್ತು ವರ್ಷಗಳ ಹಿಂದೆ ಕಾರು ಅಂದಾಕ್ಷಣ ಕಣ್ಣೆದುರು ಬರುತ್ತಿದ್ದುದು ಆ ಕಾಲದ ಸ್ಟಾರ್ ಕಾರ್ ಅಂಬಾಸಿಡರ್‌ನ ಚಿತ್ರ. ಅದೇ ಕಾರು, ಇಂದು ರಸ್ತೆಯ ಮೇಲೆಲ್ಲಾದರೂ ಕಂಡರೆ ಗತಕಾಲದ ಯಾವುದಾದರೊಂದು ಕ್ಷಣ ನೆನಪಿಗೆ ಬಾರದೇ ಇರದು. ಅಷ್ಟು ವಿಶೇಷವಾದ ಕಾರು ಅದಾಗಿತ್ತು. ಅಂಥದೇ ಫೀಲಿಂಗ್ ನೀಡಬಲ್ಲ ಕಾರುಗಳು ದೇಶದಲ್ಲಿ ಇನ್ನೂ ಇವೆ. ದೇಶಿ ಕಂಪನಿಯಾದ ಟಾಟಾ ಮೋಟಾರ್ ಕೂಡ ಇಂಥ ಅದೆಷ್ಟೋ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. “ಇಂಡಿಗೋ ಸಿಎಸ್’, ಸೆಡಾನ್ ಮಾದರಿಯ ಕಾರನ್ನು ಪರಿಚಯಿಸಿದಾಗ ಸಾಕಷ್ಟು ಮಂದಿ ಆಕರ್ಷಿತರಾಗಿದ್ದರು. ಕಾರಣ, ಅದು ಭಾರತದ ಮಟ್ಟಿಗೆ ಮೊದಲ ಕಾಂಪ್ಯಾಕ್ಟ್ ಸೆಡಾನ್ ಆಗಿತ್ತು. ಅದರ ದರವೂ ಮಧ್ಯಮ ವರ್ಗ¨ ಕೈಗೆಟುಕುಂತಿತ್ತು. ಆವತ್ತಿನ ವರೆಗೂ ಕಾರೆಂದರೆ ಅಂಬಾಸಿಡರ್ ಎನ್ನುತ್ತಿದ್ದವರೆಲ್ಲಾ ಇಂಡಿಗೋ ನೋಡಿ ಹುಬ್ಬೇರಿಸಿದ್ದೂ ಉಂಟು. ಅಷ್ಟರಲ್ಲಾಗಲೇ ಭಾರತದಲ್ಲಿ ಕೆಲ ವಿದೇಶಿ ಕಂಪನಿಗಳು ಸೆಡಾನ್ ಮಾದರಿಯ ಕಾರುಗಳನ್ನು ಪರಿಚಯಿದ್ದವಾದರೂ, ಟ್ರೆಂಡ್ ಕ್ರಿಯೇಟ್ ಮಾಡಿದ ಬೆರಳೆಣಿಕೆಯಷ್ಟು ಕಾರುಗಳಲ್ಲಿ ಇಂಡಿಗೋ ಕೂಡ ಒಂದು.ಬಾಡಿಗೆ ಓಡಿಸಲು ಅಂಬಾಸಿಡರ್ ಇಟ್ಟುಕೊಂಡಿದ್ದ ದೇಶದ ಸಹಸ್ರಾರು ಮಂದಿ ಅದನ್ನು ಮಾರಾಟಮಾಡಿ ಇಂಡಿಗೋ ಕೊಂಡಿದ್ದುಂಟು. ಸಾಮಾನ್ಯವ್ಯಕ್ತಿಯೂ ಕಾರೊಂದನ್ನು ಕೊಳ್ಳಲು ಸಾಧ್ಯ ಅನ್ನೋದನ್ನು ನ್ಯಾನೋ, ರಸ್ತೆಗಿಳಿದು ತೋರಿಸಿಕೊಟ್ಟಿದೆ. ಒಂದೂವರೆ ಲಕ್ಷ ರೂಪಾಯಿಗೂ ಒಂದು ಕಾರು ಲಭ್ಯ ಎನ್ನುವಂತೆ ಮಾಡಿದ ಟಾಟಾ ಮೋಟಾರ್, ನಾನಾ ಸೆಗೆ¾ಂಟ್‌ಗಳಲ್ಲಿ ಪರಿಚಯಿಸಿದ್ದು, ಇತ್ತೀಚೆಗೆ ಇನ್ನೊಂದು ಕಾಂಪ್ಯಾಕ್ಟ್ ಸೆಡಾನ್‌ಗೆ ಹೋಲುವ “ಟಿಗಾರ್’ ಕಾರನ್ನು ಪರಿಚಯಿಸಿದೆ.
ಸೆಡಾನ್ ಎಂದು ಹೇಳಲಾಗದ ಮತ್ತು ಹ್ಯಾಚ್‌ಬ್ಯಾಕ್ ಎಂದೂ ಗುರುತಿಸಲಾಗದ ರೀತಿಯಲ್ಲಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಮಧ್ಯಮ ವರ್ಗದವರೂ ಕೊಂಡುಕೊಳ್ಳಬಹುದಾದ ಕಾರು ಟಿಗಾರ್. ಆಧುನಿಕ ತಂತ್ರಜಾnನಗಳಿಂದ ಕೂಡಿದ “ಟಿಯಾಗೋ’ವನ್ನು ಪರಿಚಯಿಸಿದ ಬೆನ್ನಲ್ಲೇ, ಟಿಗಾರ್ ಕೂಡ ಮಾರುಕಟ್ಟೆ ಪ್ರವೇಶಿಸಿದೆ. ಒಂದು ಹಂತದಲ್ಲಿ ಗ್ರಾಹಕರ ಗಮನ ಸೆಳೆಯವಲ್ಲಿಯೂ ಯಶಸ್ವಿಯಾಗಿದೆ. ಸ್ಪರ್ಧಾತ್ಮಕ ದರ ಸಮರಕ್ಕೂ ಸೈ ಎನ್ನುವ ರೀತಿಯಲ್ಲಿದೆ ಟಿಗಾರ್.
ಟಿಗಾರ್‌ನ ವಿನ್ಯಾಸ ಅಚ್ಚುಮೆಚ್ಚು ಹಾಗೂ ಆಪ್ತವೆನಿಸುವಂತಿದೆ. ಕಪ್ಪು ಬಣ್ಣದಿಂದ ಕೂಡಿರುವ ಡ್ಯಾಶ್‌ಬೋರ್ಡ್ ಹಾಗೂ ಅದಕ್ಕೆ ಹೊಂದಿಕೊಳ್ಳುವಂಥ ಸೀಟುಗಳು ಆರಾಮದಾಯಕವಾಗಿವೆ. ಎಸಿ ವ್ಯವಸ್ಥೆ, ಮ್ಯೂಸಿಕ್ ಸೆಟ್ ಹಾಗೂ ತಂತ್ರಜಾnನ ಬಳಸಿಕೊಂಡಿರುವ ರೀತಿ ಯಾವುದೇ ಲಕ್ಸುರಿ ಕಾರುಗಳಿಗೆ ಕಡಿಮೆಯೇನಿಲ್ಲ. ಎ.ಸಿಯಲ್ಲಿರುವ ಬ್ಲೊವರ್ ಸ್ಪೀಡ್ ಮೋಡ್ ಒಂದು ಅಥವಾ ಎರಡರಲ್ಲಿ ಇದ್ದಾಗಲೂ ಚಳಿ ಚಳಿ ಎನಿಸುವಂತಿರುತ್ತದೆ. ಆಟೋ ಕ್ಲೈಮೇಟ್ ಕಂಟ್ರೋಲರ್ ಅಳವಡಿಸಿದ್ದರಿಂದ ಎ.ಸಿ ವ್ಯವಸ್ಥೆ ಅನುಭವ ಹಿತವೆನಿಸುತ್ತದೆ. ಇನ್ನು ಹರ್ಮಾನ್ ಮ್ಯೂಸಿಕ್ ಸೆಟ್ ಟಿಯಾಗೋ, ಟಿಗಾರ್ ಕಾರುಗಳಿಗೆಂದೇ ವಿಶೇಷವಾದ ವಿನ್ಯಾಸದಲ್ಲಿ ಮ್ಯೂಸಿಕ್ ಸೆಟ್ ತಯಾರಿಸಿಕೊಟ್ಟಿದೆ. ಎಕ್ಸ್‌ಟೀರಿಯರ್ ಬಗ್ಗೆ ಹೇಳುವುದಾದರೆ ಸೆಡಾನ್ ಲುಕ್. ಮುಂಭಾಗದ ಜೇನಿನ ಗೂಡಿನ ವಿನ್ಯಾಸಕ್ಕೆ ಹೋಲುವ ಗ್ರಿಲ್ ಸೌಂದರ್ಯವನ್ನು ಹೆಚ್ಚಿಸಿದೆ. ಹಿಂಭಾಗದ ವಿನ್ಯಾಸ ಮಿನಿ ಎಸ್‌ಯುವಿಯನ್ನು ಹೋಲುವಂತಿದೆ. ಎಂಜಿನ್ ಕಾರ್ಯಕ್ಷಮತೆ
ಸದ್ಯಕ್ಕೆ ಭಾರತದಲ್ಲಿ ಪಾಪ್ಯುಲರ್ ಎನಿಸಿಕೊಳ್ಳುವ ಉಳಿದ ಕಂಪನಿಗಳ ಸೆಡಾನ್ ಕಾರುಗಳಿಗೆ ಟಿಗಾರ್ ಪ್ರಬಲ ಸ್ಪರ್ಧಿಯಲ್ಲ. ಅಷ್ಟಕ್ಕೂ ಹೋಲಿಕೆ ಮಾಡುವುದೂ ಸರಿ ಎನಿಸಲಿಕ್ಕಿಲ್ಲ. ಕಾರಣ ಟಿಗಾರ್‌ನಲ್ಲಿ ಬಳಸಿಕೊಳ್ಳಲಾದ ಎಂಜಿನ್ ಅನ್ನೇ ಸಾಮರ್ಥ್ಯ ಉಳಿದ ಕಾರುಗಳಿಗೆ ಸಾಮ್ಯವಾಗಿರುವಂತಿಲ್ಲ. ಹ್ಯಾಚ್‌ಬ್ಯಾಕ್ ಟಿಯಾಗೋದಲ್ಲಿ ಬಳಸಿಕೊಳ್ಳಲಾದ ಎಂಜಿನ್ ಈ ಕಾರಿನಲ್ಲೂ ಬಳಸಿಕೊಳ್ಳಲಾಗಿದೆ. 1,050 ಸಿಸಿ ಎಂಜಿನ್ ಇದರದ್ದಾಗಿದ್ದು, ಜಗ್ಗುವ ಸಾಮರ್ಥ್ಯವನ್ನು ಒಂದು ಲಿಮಿಟೇಷನ್‌ನಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನಗರ ಪ್ರದೇಶಗಳಲ್ಲಿ ಓಡಾಡಿಸಲು ಯಾವುದೇ ಸಮಸ್ಯೆ ಎದುರಾಗದು. 3ಸಿಲಿಂಡರ್, 5ಸ್ಪೀಡ್ ಗೇರ್ ಅಳವಡಿಸಲಾಗಿದ್ದು,
Related Articles
4.80 ಲಕ್ಷ ರೂ.ನಿಂದ 7.40 ಲಕ್ಷ ರೂ.
Advertisement
ಹೈಲೈಟ್ಸ್* ಹೋಂಡಾ ಅಮೇಜ್, ಮಾರುತಿ ಸ್ವಿಫ್ಟ್ ಡಿಸಾಯರ್, ಹುಂಡೈ ಎಕ್ಸೆಂಟ್‌ಗೆ ಪ್ರತಿಸ್ಪರ್ಧಿ
* 10 ವೇರಿಯಂಟ್‌ಗಳಲ್ಲಿ ಹಾಗೂ ಒಟ್ಟು ಆರು ಬಣ್ಣಗಳಲ್ಲಿ ಲಭ್ಯ
* ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಬಳಕೆಯ ಕಾರುಗಳು ಲಭ್ಯ
* ಮೈಲೇಜ್: ಪ್ರತಿ ಲೀಟರ್‌ಗೆ 20ರಿಂದ 24 ಕಿಲೋ ಮೀಟರ್
* ಬೂಟ್ ಸ್ಪೇಸ್: 410 ಲೀಟರ್
* ಇಂಧನ ಶೇಖರಣೆ ಸಾಮರ್ಥ್ಯ: 35 ಲೀಟರ್ ಅಗ್ನಿಹೋತ್ರ