Advertisement
ರಾಜ್ಯದ ಒಟ್ಟು 75,960 ಶಾಲೆಗಳ 1.04 ಕೋಟಿ ವಿದ್ಯಾರ್ಥಿಗಳಿಗೆ ಅಪಾರ್ ಐಡಿ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ 10.13 ಲಕ್ಷ ವಿದ್ಯಾರ್ಥಿಗಳ (ಶೇ.9.68) ನೋಂದಣಿ ಆಗಿದೆ. ಆಧಾರ್ ಕಾರ್ಡ್ನಂತೆ ಅಪಾರ್ ಕಾರ್ಡ್ ಕೂಡ ವಿಶಿಷ್ಟ 12 ಅಂಕಿಯನ್ನು ಹೊಂದಿರುತ್ತದೆ.
Related Articles
ಈ ಮಧ್ಯೆ ನೋಂದಣಿ ಬಗ್ಗೆ ಪೋಷಕರಲ್ಲಿ ಪೂರ್ಣ ಮಾಹಿತಿ ಇಲ್ಲದ ಕಾರಣದಿಂದ ಕೆಲವರು ಶಾಲೆಗಳಲ್ಲಿ ಆಕ್ಷೇಪ ವ್ಯಕ್ತಪಡಿಸುವ ಘಟನೆಯೂ ಕೆಲವೆಡೆ ನಡೆಯುತ್ತಿದೆ. ಈ ವೇಳೆ ಶಿಕ್ಷಣ ಇಲಾಖೆ, ಶಾಲಾ ಅಧ್ಯಾಪಕರು ಕೆಲವು ಪೋಷಕರಿಗೆ ಪೂರ್ಣವಾಗಿ ಮನದಟ್ಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಇದನ್ನು ಅನುಷ್ಠಾನಿಸಬೇಕು ಎಂದು ಕೆಲವು ಪೋಷಕರು ಒತ್ತಾಯಿಸಿದ್ದಾರೆ. ಹೀಗಾಗಿಯೇ ರಾಜ್ಯದ 75,960 ಶಾಲೆಗಳ ಪೈಕಿ 47,240 ಶಾಲೆಗಳಲ್ಲಿ (ಶೇ. 62.19)ಅಪಾರ್ ನೋಂದಣಿ ಇನ್ನಷ್ಟೇ ಆರಂಭವಾಗಬೇಕಿದೆ.
Advertisement
ಏನಿದು ಅಪಾರ್ ?ಭಾರತದಲ್ಲಿ ಆಧಾರ್ ಮಾನ್ಯತೆಯನ್ನು ಪಡೆದಿರುವಂತೆಯೇ, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಕಾಪಿಡಲು ಜಾರಿಗೆ ತಂದಿರುವುದೇ ಅಪಾರ್. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಇನ್ನು ಮುಂದೆ ಅಪಾರ್ನಲ್ಲಿ ಇರಲಿದೆ. ಇದು ಭಾರತದ ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆಯುವಾಗಲೂ ಆಧಾರವಾಗಲಿದೆ. ವಿದ್ಯಾರ್ಥಿಯ ಶೈಕ್ಷಣಿಕ ಟ್ರಾÂಕ್ ಅನ್ನು ಇದರಿಂದ ಪರಿಶೀಲಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿ ಕಲಿಯುವ ಶಾಲೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಡೇಟಾ, ಸಾಧನೆಗಳು ಹಾಗೂ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ನಿರ್ವಹಣೆ ಮಾಡಲಾಗುತ್ತದೆ. ಜತೆಗೆ ವಿದ್ಯಾರ್ಥಿವೇತನ ವಿವರವೂ ಇದರಲ್ಲೇ ಭದ್ರವಾಗಲಿದೆ. ವಿದ್ಯಾರ್ಥಿಯ ಐಡಿ ಬಳಸಿ ಇದನ್ನು ಪರಿಶೀಲಿಸಬಹುದು. “ಅಪಾರ್ ನೋಂದಣಿ ಪ್ರಗತಿಯಲ್ಲಿ’
ಅಪಾರ್ ಪ್ರತೀ ವಿದ್ಯಾರ್ಥಿಗೆ ವಿಶಿಷ್ಟವಾದ ಹಾಗೂ ಶಾಶ್ವತವಾದ 12 ಅಂಕಿಯ ಐಡಿಯನ್ನು ನೀಡುತ್ತದೆ. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಸಹಿತ ಸಂಪೂರ್ಣ ಮಾಹಿತಿಯ ಸಮಗ್ರ ದಾಖಲೆ ಇದರಲ್ಲಿರಲಿದೆ. ಅಪಾರ್ ಐಡಿಯು ಅವರ ಶೈಕ್ಷಣಿಕ ವೃತ್ತಿಜೀವನದ ಉದ್ದಕ್ಕೂ ವಿದ್ಯಾರ್ಥಿಯೊಂದಿಗೆ ಬಳಕೆಯಾಗಲಿದೆ. ಎಲ್ಲ ಶಾಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಈಗ ನಡೆಯುತ್ತಿದೆ.
-ವೆಂಕಟೇಶ ಪಟಗಾರ, ಗಣಪತಿ ಡಿಡಿಪಿಐ, ದಕ್ಷಿಣ ಕನ್ನಡ, ಉಡುಪಿ -ದಿನೇಶ್ ಇರಾ