ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, 2002ರಲ್ಲಿ ಪ್ರಸಾದ್ ನೇತ್ರಾಲಯವು ಉಡುಪಿಯಲ್ಲಿ ತನ್ನ ಸೇವೆ ಆರಂಭಿಸಿತ್ತು. ಈಗ ಪ್ರಸಾದ್ ನೇತ್ರಾಲಯದ 5ನೇ ಕೇಂದ್ರವು ಪಂಪ್‌ವೆಲ್‌ನ ಉಜ್ಜೋಡಿಯಲ್ಲಿ ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಆಗಿರುವುದರಿಂದ ಈ ಭಾಗದ ಜನರಿಗೆ ಉಪಯೋಗವಾಗಲಿದೆ. ಡಾ| ಕೃಷ್ಣಪ್ರಸಾದ್ ಕೂಡ್ಲು ಮುಖಂಡತ್ವದಲ್ಲಿ ನೂತನ ವೈದ್ಯಕೀಯ ಸಂಸ್ಥೆಯು ಅಭಿ
ವೃದ್ಧಿ ಕಾಣುವ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ಕಲ್ಪಿಸುವಂತಾಗಲಿ ಎಂದು ಶುಭ ಹಾರೈಸಿದರು.
Advertisement
ಧರ್ಮಗುರುಗಳಾದ ರೆ|ಫಾ| ಗಾಡ್‌ಫ್ರೇ ಸಲ್ಡಾನ ಮತ್ತು ಹಾಜಿ ಅಬು ಸುಫಿಯಾನ್ ಮದನಿ ಆಶೀರ್ವಚನವಿತ್ತರು. ಜ್ಯೋತಿಷ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ ಅಭಿನಂದನ ಭಾಷಣ ಮಾಡಿದರು. ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿದರು. ಡಾ| ಪಿ. ದಯಾನಂದ ಪೈ-ಪಿ. ಸತೀಶ್ ಪೈ ಉಪಸ್ಥಿತರಿದ್ದರು.
Related Articles
Advertisement
ಅತ್ಯುತ್ತಮ ಕಣ್ಣಿನ ಸೇವೆಯ ಗುರಿಡಾ| ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಕೈಗೆಟಕುವ ದರದಲ್ಲಿ ಅತ್ಯುತ್ತಮ ಕಣ್ಣಿನ ಸೇವೆಯನ್ನು ಮಂಗಳೂರು ವ್ಯಾಪ್ತಿಯ ಜನರಿಗೆ ನೀಡುವ ಆಶಯದೊಂದಿಗೆ ನೇತ್ರಾಲಯ ಆರಂಭಿಸಲಾಗುತ್ತಿದೆ. ಕ್ಯಾಟರಾಕ್ಟ್ ವಿಭಾಗ, ಗ್ಲಕೋಮ ವಿಭಾಗ, ಲಾಸಿಕ್-ಸ್ಮೈಲ್ ಒಳಗೊಂಡಂತೆ ರಿಫ್ರಾಕ್ಟಿವ್ ಸರ್ಜರಿ ವಿಭಾಗ, ಮಕ್ಕಳ ಕಣ್ಣಿನ ವಿಭಾಗ, ಮೆಳ್ಳೆಗಣ್ಣು ವಿಭಾಗ, ರೆಟಿನಾ ಕಣ್ಣಿನ ನರ ವಿಭಾಗ, ಮಧುಮೇಹ ಕಣ್ಣಿನ ಚಿಕಿತ್ಸಾ ವಿಭಾಗ, ಆಕ್ಯುಲೋಪ್ಲಾಸ್ಟಿ, ಕಣ್ಣಿನ ಕರಿಗುಡ್ಡೆ ಚಿಕಿತ್ಸಾ ವಿಭಾಗ, ನೇತ್ರ ಬ್ಯಾಂಕ್ ವಿಭಾಗಗಳೊಂದಿಗೆ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಆರ್ಥಿಕವಾಗಿ ಹಿಂದುಳಿದವರಿಗೂ ನೇತ್ರ ಚಿಕಿತ್ಸೆ ನೀಡುತ್ತಿದೆ. ರಾಜ್ಯದ ಆರು ಜಿಲ್ಲೆಗಳು, ನೆರೆಯ ಕೇರಳ ಮತ್ತು ಗೋವಾ ರಾಜ್ಯವನ್ನು ಒಳಗೊಂಡಂತೆ ನೇತ್ರಜ್ಯೋತಿ ಟ್ರಸ್ಟ್ ಮೂಲಕ ಈ ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದರು.