Advertisement
ಆಸ್ಪತ್ರೆಯ 200 ಹಾಸಿಗೆಗಳ ಮೆಡಿಸಿನ್ ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣಕ್ಕೆ ರಾಜ್ಯ ಸರಕಾರ 10 ಕೋ.ರೂ. ಮಂಜೂರುಗೊಳಿಸಿದೆ. ಐಎಂಎಗೆ ತಾಗಿಕೊಂಡಿರುವಂತೆ ಇರುವ ಆಸ್ಪತ್ರೆಯ ಜಾಗದಲ್ಲಿ ಈ ವಿಭಾಗ ನಿರ್ಮಾಣವಾಗಲಿದೆ. ಹೃದ್ರೋಗ ವಿಭಾಗ, ಕ್ಯಾಥ್ ಲ್ಯಾಬ್, ಎಂಡೋಸ್ಕೋಪಿ, ಐಸಿಯು, ಜನರಲ್ ವಾರ್ಡ್, ಡಯಾಲಿಸಿಸ್, ಬ್ಲಿಡ್ ಬ್ಯಾಂಕ್ ಮುಂತಾದ ವಿಭಾಗ ಗಳು ಇಲ್ಲಿ ಕಾರ್ಯಾಚರಿಸಲಿವೆ. ಆಸ್ಪತ್ರೆಯಲ್ಲಿ ಮೆಡಿಸಿನ್ ಸೂಪರ್ ಸ್ಪೆಷಾಲಿಟಿ ಸುಸಜ್ಜಿತ ವಿಭಾಗವೊಂದು ನಿರ್ಮಾಣ ವಾಗಬೇಕೆಂಬ ಬಹುದಿನದ ಬೇಡಿಕೆ ಈಗ ಸಾಕಾರಗೊಳ್ಳುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗ (ಕೆಎಚ್‌ಎಸ್‌ಡಿಆರ್‌ಪಿ) ಯೋಜನೆಯನ್ನು ಸಿದ್ಧಪಡಿಸಿದೆ.
ಕೆಎಂಸಿ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲೇ 350 ಹಾಸಿಗೆ ಗಳ ಸರ್ಜಿಕಲ್ ಸೂಪರ್‌ಸ್ಪೆಷಾಲಿಟಿ ವಿಭಾಗ ನಿರ್ಮಾಣವಾಗುತ್ತಿದೆ. 5 ಅಂತಸ್ತುಗಳ ಈ ಬ್ಲಾಕ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರಲಿವೆ. ಕ್ಯಾಶುವಲ್ಟಿ, ಸರ್ಜಿ ಕಲ್ ಐಸಿಯು, 10 ಮಾಡ್ಯುಲರ್ ಆಪರೇಶನ್ ಕೊಠಡಿಗಳು, ಕ್ಯಾನ್ಸರ್, ಮೂತ್ರರೋಗ ಚಿಕಿತ್ಸೆ ಸಹಿತ ವಿವಿಧ ವಿಭಾಗಗಳನ್ನು ಒಳಗೊಳ್ಳಲಿದೆ. ಯೋಜನೆ ಅನುಷ್ಠಾನ ಕುರಿತಂತೆ ಈಗಾಗಲೇ ಪ್ರಾಥ ಮಿಕ ಪ್ರಕ್ರಿಯೆ ಆರಂಭಗೊಂಡಿದೆ. ಸಂಯುಕ್ತ ಆಯುಶ್ ಆಸ್ಪತ್ರೆ
ಆಲೋಪಥಿ ಚಿಕಿತ್ಸೆಯೊಂದಿಗೆ ಆಯುಶ್ ಪದ್ಧತಿಯ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ 9 ಕೋ.ರೂ. ವೆಚ್ಚದಲ್ಲಿ 50 ಹಾಸಿಗೆಗಳ ಸಂಯುಕ್ತ ಆಯುಶ್ ಆಸ್ಪತ್ರೆ ನಿರ್ಮಾಣವಾಗಲಿದೆ. ರೈಲ್ವೇ ನಿಲ್ದಾಣದ ಬಳಿ ವೆನ್ಲಾಕ್ ಜಾಗದಲ್ಲಿ ಬರಲಿರುವ ಆಯುಶ್ ಆಸ್ಪತ್ರೆಯಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪಥಿ ಹಾಗೂ ಯೋಗ ವಿಭಾಗಗಳು ಇರಲಿವೆ. ಇದು ರಾಜ್ಯದಲ್ಲೇ ಆಯುಶ್ ಸಮಗ್ರ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡಿರುವ ರಾಜ್ಯದ ಪ್ರಥಮ ಸಂಯುಕ್ತ ಆಸ್ಪತ್ರೆಯಾಗಲಿದೆ. ಆಸ್ಪತ್ರೆಯಲ್ಲಿ ರಕ್ತ ವಿಭಜನೆ ವ್ಯವಸ್ಥೆ ಒಳಗೊಂಡಿರುವ ಬ್ಲಿಡ್ ಟ್ರಾನ್ಸ್ ಮಿಶನ್ ಬ್ಲಾಕ್ ಸಹ ಬರಲಿದೆ. ಆರ್‌ಎಪಿಸಿಸಿ ಹಿಂದೆ ಖಾಲಿ ಇರುವ ಸ್ಥಳ ದಲ್ಲಿ 176 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ.
Related Articles
Advertisement