Advertisement
ಈ ವರ್ಷದ ಮೊದಲ ಸೂಪರ್ ಮೂನ್ ಜ. 21ರಂದು ಗೋಚರಿಸಿದ್ದು, 2ನೇ ಸೂಪರ್ ಮೂನ್ ಕಳೆದ ತಿಂಗಳು 19ರಂದು ಗೋಚರಿತ್ತು. ಗುರುವಾರದ ಹುಣ್ಣಿಮೆ ಚಂದ್ರ ಸೂಪರ್ ಮೂನ್ ಆಗಿದ್ದು, ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 25 ಅಂಶ ಹೆಚ್ಚು ಬೆಳದಿಂಗಳ ಪ್ರಭೆಯಲ್ಲಿ ಗೋಚರಿಸುತ್ತಾನೆ. ಅದೇ ರೀತಿ ಗುರುವಾರ ಚಂದ್ರ ಭೂಮಿಯಿಂದ 3,60,772 ಕಿ.ಮೀ. ದೂರದಲ್ಲಿ ಸುತ್ತಿದ್ದು, ಭವ್ಯ ಬೆಳದಿಂಗಳಿತ್ತು.
ಪಣಂಬೂರು ಬೀಚ್ ಅಬಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ ಪ್ರತಿಕ್ರಿಯಿಸಿ, ಸೂಪರ್‌ಮೂನ್ ಕಾರಣದಿಂದ ಎರಡು ದಿನಗಳಿಂದ ಪಣಂಬೂರು, ತಣ್ಣೀರು ಬಾವಿ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿತ್ತು. ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರವಾಸಿಗರನ್ನು ನೀರಿಗೆ ಇಳಿಯಲು ಬಿಡುತ್ತಿಲ್ಲ ಎಂದಿದ್ದಾರೆ. ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿ ಯಿಸಿ, “ಸೂಪರ್ ಮೂನ್ ಪರಿಣಾಮ ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಗರಿಷ್ಠ ಉಷ್ಣಾಂಶ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. 2 ದಿನಗಳಲ್ಲಿ ಕರಾವಳಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
Related Articles
Advertisement