Advertisement
ರಿಟೇಲ್ ಉದ್ಯಮದಲ್ಲಿ ಮಾಹಿತಿ ತಂತ್ರಜ್ಞಾನ, ಆಟೋಮೇಷನ್, ಆರ್ಟಿಶಿಯಲ್ ಇಂಟೆಲಿಜೆನ್ಸ್, ಮೆಶೀನ್ ಲರ್ನಿಂಗ್ ಮೊದಲಾದ ತಂತ್ರಜ್ಞಾನಗಳನ್ನು ಭಾರತದ ರಿಟೇಲ್ ಉದ್ಯಮ ಕೂಡಾ ಬಳಸಲು ಪ್ರಾರಂಭಿಸಿದೆ. ಬಾರ್‌ಕೋಡ್, ದಾಸ್ತಾನು ನಿರ್ವಹಣೆ, ಹೊಸ ವಸ್ತು ಖರೀದಿ, ಬಿಲ್ಲಿಂಗ್, ಪಾಯಿಂಟ್ ಆಫ್ ಸೇಲ್, ಮೊದಲಾದ ತಂತ್ರಜ್ಞಾನ ಮತ್ತು ತಂತ್ರಾಂಶದ ಬಳಕೆಯನ್ನು ಮಹಾನಗರಗಳು ಮಾತ್ರವಲ್ಲದೆ ಎರಡನೆ ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿರುವ ರಿಟೇಲ್ ಮಳಿಗೆಗಳಲ್ಲಿ ಕೂಡಾನೋಡಬಹುದಾಗಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ಭೀಮ್ ನಂತಹ ವ್ಯಾಲೆಟ್‌ಗಳ ಬಳಕೆ, ಮೊಬೈಲ್ ವಾಣಿಜ್ಯ, ಆನ್‌ಲೈನ್ ಪೇಮೆಂಟ್, ಹೀಗೆ ವಿವಿಧ ಸೌಲಭ್ಯಗಳು ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ
ಜನಪ್ರಿಯವಾಗುತ್ತಿವೆ.
ರಿಟೇಲ್ ಉದ್ಯಮ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಇದರಿಂದಾಗಿ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮಾಲ್‌ಗಳು. ಸೂಪರ್ ಮಾರ್ಕೆಟ್ ಗಳು, ದೊಡ್ಡ ಡಿಪಾರ್ಟಮೆಂಟ್ ಸ್ಟೋರ್‌ಗಳು, ಗ್ರಾಹಕರಿಗೆ ಹೊಸ ಸೌಲಭ್ಯ ಮತ್ತು ಸೇವೆಗಳನ್ನು ನೀಡಲು ಪ್ರಾರಂಭಿಸುತ್ತವೆ. ರಿಟೇಲ್ ಮಳಿಗೆಯಲ್ಲಿ ವಿವಿಧ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿರುವ ಸ್ಟೋರ್ ಸೆಲ್ಫ್ಗಳು, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲಿವೆ. ಉದಾಹರಣೆಗೆ, ನಾವು ಒಂದು ಕೆ.ಜಿ ಅಕ್ಕಿಯ ಪ್ಯಾಕ್ ಕೈಗೆತ್ತಿಕೊಂಡರೆ, ಆ ಪ್ಯಾಕ್‌ನಲ್ಲಿರುವ ಅಕ್ಕಿಯನ್ನು ಯಾವ ರಾಜ್ಯ ಅಥವಾ ಊರಿನಲ್ಲಿ ಮತ್ತು ಯಾವ ತಿಂಗಳು, ವರ್ಷದಲ್ಲಿ ಬೆಳೆಯಲಾಗಿದೆ, ಅಕ್ಕಿಯನ್ನು ಯಾವಾಗ ಪ್ಯಾಕ್ ಮಾಡಲಾಗಿದೆ, ಅನ್ನ ಮಾಡಲು ಎಷ್ಟು ಪ್ರಮಾಣದ ನೀರು ಬಳಸಬೇಕು, ಮುಂತಾದ ಹತ್ತು ಹಲವು
ವಿವರಗಳನ್ನು ಡಿಜಿಟಲ್ ಸ್ಕ್ರೀನ್ ಮೂಲಕ ನಮಗೆ ನೀಡುವ ಸ್ಟೋರ್ ಸೆಲ್ಫ್ಗಳಿರುತ್ತವೆ. ಈಗ ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಕಾರ್ಟ್‌ಗೆ ಹಾಕಿಕೊಂಡು, ನಂತರ ಬಿಲ್ಲಿಂಗ್ ಕೌಂಟರ್‌ಗೆ ಬರಬೇಕು. ಅಲ್ಲಿ ಬಾರ್‌ಕೋಡ್ ಸ್ಕ್ಯಾನರ್ ಮತ್ತು ಬಿಲ್ಲಿಂಗ್ ತಂತ್ರಾಂಶ ಬಳಸಿ, ನಾವು ಖರೀದಿಸಿದ ವಸ್ತುಗಳ ಬಿಲ್ ಮಾಡುತ್ತಾರೆ. ನಗದು ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಬಿಲ್‌ನ ಮೊತ್ತ ಪಾವತಿಸಿ, ನಾವು ಖರೀದಿಸಿದ ವಸ್ತುಗಳೊಡನೆ ಮಳಿಗೆಯನಿರ್ಗಮನ ದ್ವಾರಕ್ಕೆ ಬರುತ್ತೇವೆ. ಅಲ್ಲಿರುವ ಸೆಕ್ಯೂರಿಟಿ ನಾವು ಖರೀದಿಸಿದ ವಸ್ತುಗಳು ಮತ್ತು ಬಿಲ್ ಪಾವತಿ ಮಾಡಿರುವುದನ್ನು ಖಚಿತ ಪಡಿಸಿಕೊಂಡು, ನಮಗೆ ಹೊರಗೆ ಹೋಗಲು ಅನುಮತಿಸುತ್ತಾನೆ.
Related Articles
Advertisement
ಉದಯಶಂಕರ್ ಪುರಾಣಿಕ